ಮಹಾರಾಷ್ಟ್ರ: 11 ಬಾರಿ ಶಾಸಕರಾಗಿದ್ದ ಗಣಪತ್ ರಾವ್ ದೇಶ್ ಮುಖ್ ನಿಧನ

ಮಹಾರಾಷ್ಟ್ರದಲ್ಲಿ 11 ಬಾರಿ ಶಾಸಕರಾಗಿದ್ದ ಗಣಪತ್ ರಾವ್ ದೇಶ್ ಮುಖ್ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಗಣಪತ್ ರಾವ್ ದೇಶ್ ಮುಖ್
ಗಣಪತ್ ರಾವ್ ದೇಶ್ ಮುಖ್

ಮುಂಬೈ: ಮಹಾರಾಷ್ಟ್ರದಲ್ಲಿ 11 ಬಾರಿ ಶಾಸಕರಾಗಿದ್ದ ಗಣಪತ್ ರಾವ್ ದೇಶ್ ಮುಖ್ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ರೈತರ ಲೇಬರ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಶಾಸಕರಾದ ಗಣಪತ್ ರಾವ್ ದೇಶ್ ಮುಖ್ ಅವರು ಶುಕ್ರವಾರ ಸೋಲಾಪುರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 

ಎರಡು ದಿನಗಳ ಹಿಂದೆ, ಗಾಲ್ ಬ್ಲಾಡರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಗಣಪತ್ ರಾವ್ ದೇಶ್ ಮುಖ್ ಅವರು ಸೋಲಾಪುರ ಜಿಲ್ಲೆಯ ಸಾಂಗ್ಲಾ ಕ್ಷೇತ್ರದಿಂದ 11 ಬಾರಿ ಚುನಾಯಿತರಾಗಿದ್ದರು. ಆ ಮೂಲಕ ಅತೀ ಹೆಚ್ಚು ಬಾರಿ ಶಾಸಕರಾದ ದೇಶದ 2ನೇ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com