ಕರ್ನಾಟಕ ಇನ್ಮುಂದೆ 'ಕೆಎಸ್ಆರ್‌ಟಿಸಿ' ಅಂತ ಬಳಸುವಂತಿಲ್ಲ: ಹೆಸರು, ಲೋಗೋ ಕೇರಳ ಪಾಲು!
ಕರ್ನಾಟಕ ಇನ್ನು ಮುಂದೆ ಕೆಎಸ್ಆರ್‌ಟಿಸಿ ಅಂತ ಬಳಸುವಂತಿಲ್ಲ. ಕೇರಳ ಮಾತ್ರ ಕೆಎಸ್ಆರ್‌ಟಿಸಿ ಪದ ಬಳಸಬೇಕು ಎಂದು ಕೇಂದ್ರ ವ್ಯಾಪಾರ ಗುರುತು ನೋಂದಾವಣಿ (ಟ್ರೇಡ್ ಮಾರ್ಕ್ ರಿಜಿಸ್ಟಿ) ಅಂತಿಮ ತೀರ್ಪು ನೀಡಿದೆ.
Published: 02nd June 2021 11:59 PM | Last Updated: 03rd June 2021 12:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಇನ್ನು ಮುಂದೆ ಕೆಎಸ್ಆರ್‌ಟಿಸಿ ಅಂತ ಬಳಸುವಂತಿಲ್ಲ. ಕೇರಳ ಮಾತ್ರ ಕೆಎಸ್ಆರ್‌ಟಿಸಿ ಪದ ಬಳಸಬೇಕು ಎಂದು ಕೇಂದ್ರ ವ್ಯಾಪಾರ ಗುರುತು ನೋಂದಾವಣಿ (ಟ್ರೇಡ್ ಮಾರ್ಕ್ ರಿಜಿಸ್ಟಿ) ಅಂತಿಮ ತೀರ್ಪು ನೀಡಿದೆ.
ಕರ್ನಾಟಕ ಮತ್ತು ಕೇರಳ ನಡುವೆ ಹಲವು ವರ್ಷಗಳಿಂದಲೂ ಕೆಎಸ್ಆರ್‌ಟಿಸಿಗಾಗಿ ಕಾನೂನು ಸಮರ ನಡೆಸುತ್ತಾ ಬಂದಿದ್ದು ಇದೀಗ ಇದಕ್ಕೆ ಬ್ರೇಕ್ ಬಿದ್ದಿದೆ. ಕೇರಳ ಮಾತ್ರ ಇನ್ನು ಮುಂದೆ ತನ್ನ ಸಾರಿಗೆ ಸಂಸ್ಧೆಯನ್ನು ಕೆಎಸ್ಆರ್‌ಟಿಸಿ ಅಂತ ಬಳಸಬೇಕು. ಅಲ್ಲದೆ ಕರ್ನಾಟಕ ರಾಜ್ಯದ ಸಾರಿಗೆ ಬಸ್ ಮತ್ತು ಇತರ ಕಡೆ ನೋದಾಯಿಸಿದ್ದ, ಪ್ರಕಟನೆ ಬೋರ್ಡ್ ಎಲ್ಲ ಲೋಗೋ ಮತ್ತು ಚಿತ್ರಗಳನ್ನು ತೆಗೆಯಬೇಕಾಗುತ್ತದೆ.
ಆನ್ ಲೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡುವವರಿಗೆ ತಲೆಬಿಸಿಯಾಗುತ್ತಿತ್ತು. ಇದಕ್ಕೆ ಕಾರಣ ಕೇರಳ ರಸ್ತೆ ಸಾರಿಗೆ ನಿಮಗದ ಬಸ್ ಟಿಕೆಟ್ ಕಾದಿರಿಸುವವರಿಗೆ ಕರ್ನಾಟಕ ಕೆಎಸ್ಆರ್‌ಟಿಸಿ ಬಸ್ ಸೇವೆಯ ವಿವರಗಳು ಲಭ್ಯವಾಗುತ್ತಿತ್ತು. ಹೀಗಾಗಿ ಕೇರಳ ಸರ್ಕಾರ ಆಕ್ಷೇಪವೆತ್ತಿತ್ತು.
ಇದಕ್ಕಾಗಿ ಕರ್ನಾಟಕ ಕೆಎಸ್ಆರ್‌ಟಿಸಿ ಟ್ರೇಡ್ ಮಾರ್ಕ್ ಅನ್ನು ತಾನು ಮಾತ್ರ ಬಳಸಲು ಅವಕಾಶ ನೀಡುವಂತೆ ಕೋರಿ 2014ರಲ್ಲಿ ಕೇಂದ್ರ ಟ್ರೇಡ್ ಮಾರ್ಕ್ ನೋದಂಣಿ ಪ್ರಾಧಿಕಾರದ ಮೆಟ್ಟಿಲೇರಿತ್ತು. ಇದಕ್ಕೆ ಪ್ರತಿಯಾಗಿ ಕೇರಳ ಸಹ ಪ್ರತಿದೂರು ಸಲ್ಲಿಸಿತ್ತು.
1948ರಲ್ಲಿ ಕರ್ನಾಟಕದಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ(ಎಂಜಿಆರ್‌ಟಿಡಿ) ಎಂದು ಕರೆಯಲಾಗಿತ್ತು. ಆದರೆ 1973ರ ನಂತರ ಮೈಸೂರು ಕರ್ನಾಟಕ ಅಂತ ನಾಮಕರಣವಾದ ಮೇಲೆ ಕೆಎಸ್ಆರ್‌ಟಿಸಿ ಪದ ಬಳಸಲು ಆರಂಭಿಸಿತ್ತು.
ಕೇರಳದಲ್ಲೂ ಕೆಎಸ್ಆರ್‌ಟಿಸಿಗೂ ಮೊದಲು ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ(ಟಿಎಸ್ಟಿಡಿ) ಎಂದು ಕರೆಯಾಗುತ್ತಿತ್ತು. ಬಳಿಕ 1965 ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಆಗಿತ್ತು. ಇದನ್ನು ಮುಂದಿಟ್ಟುಕೊಂಡು ಕೇರಳ ವಾದ ಮಂಡಿಸಿ ಸಮರದಲ್ಲಿ ಯಶಸ್ವಿಯಾಗಿದೆ.