ಭಾರತದಲ್ಲಿ ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ 9.27 ಲಕ್ಷಮಕ್ಕಳು: ಅತಿ ಹೆಚ್ಚು ಯಾವ ರಾಜ್ಯದಲ್ಲಿ ಗೊತ್ತೇ?

ಭಾರತದಲ್ಲಿ 9.27 ಲಕ್ಷಕ್ಕೂ ಅಧಿಕ ಮಕ್ಕಳು ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆರ್ ಟಿಐ ಮೂಲಕ ಬಹಿರಂಗಗೊಂಡಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ಭಾರತದಲ್ಲಿ 9.27 ಲಕ್ಷಕ್ಕೂ ಅಧಿಕ ಮಕ್ಕಳು ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆರ್ ಟಿಐ ಮೂಲಕ ಬಹಿರಂಗಗೊಂಡಿದೆ. 

ಕೋವಿಡ್-19 ಆತಂಕದ ನಡುವೆ ಇದು ಹೊಸ ಆತಂಕವನ್ನು ಸೃಷ್ಟಿಸಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಪ್ರದೇಶದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ ರಾಜ್ಯ ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಕೋವಿಡ್-19 ಸಾಂಕ್ರಾಮಿಕ ಅಪೌಷ್ಟಿಕತೆ ಹಾಗೂ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಹೊಸ ಆತಂಕ ಮೂಡಿದೆ. 

6 ತಿಂಗಳಿನಿಂದ 6 ವರ್ಷಗಳವರೆಗಿನ ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತಿದ್ದು, ನವೆಂಬರ್ ತಿಂಗಳವರೆಗೂ 9,27,606 ಮಕ್ಕಳು ಈ ಸಮಸ್ಯೆಯಿಂದ ಬಳುತ್ತಿರುವುದು ಪತ್ತೆಯಾಗಿದೆ ಎಂದು ಆರ್ ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿದೆ. 

9 ಲಕ್ಷ ಮಕ್ಕಳ ಪೈಕಿ ಉತ್ತರ ಪ್ರದೇಶದಲ್ಲಿ 3,98,359 ಮಕ್ಕಳು ಹಾಗೂ ಬಿಹಾರದಲ್ಲಿ 2,79,427 ಮಕ್ಕಳು ಅಪೌಷ್ಟಿಕತೆ ಹೊಂದಿದ್ದರೆ, ಲಡಾಖ್, ಲಕ್ಷದ್ವೀಪ, ನಾಗಾಲ್ಯಾಂಡ್, ಮಣಿಪುರ, ಮಧ್ಯಪ್ರದೇಶಗಳಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಪ್ರಮಾಣದಲ್ಲಿದೆ.  

ಲಡಾಖ್ ನ್ನು ಹೊರತುಪಡಿಸಿ, ಮಧ್ಯಪ್ರದೇಶವೂ ಸೇರಿ ಉಳಿದ ನಾಲ್ಕು ರಾಜ್ಯಗಳ ಅಂಗನವಾಡಿ ಕೇಂದ್ರಗಳಿಂದ ಈ ಸಂಬಂಧ ಯಾವುದೇ ಮಾಹಿತಿಯೂ ಲಭ್ಯವಿಲ್ಲ ಎಂದು ಆರ್ ಟಿಐ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ. 

ಪೌಷ್ಠಿಕಾಂಶದ ಎಡಿಮಾದ ಇರುವಿಕೆ, ಮಧ್ಯದ ಮೇಲಿನ ತೋಳಿನ ಸುತ್ತಳತೆ 115 ಮಿ.ಮೀ ಗಿಂತ ಕಡಿಮೆ ಇರುವುದು, ಮಗು ತನ್ನ ಎತ್ತರಕ್ಕೆ ಕಡಿಮೆ ತೂಕ ಹೊಂದಿದ್ದರೆ ಅದನ್ನು ತೀವ್ರವಾದ ಅಪೌಷ್ಟಿಕತೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ವ್ಯಾಖ್ಯಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com