ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮಲಯಾಳಂ ಮಾತನಾಡದಂತೆ ದಾದಿಯರಿಗೆ ಸೂಚನೆ!

ಆಸ್ಪತ್ರೆಯಲ್ಲಿ ದಾದಿಯರು ಬಳಸುತ್ತಿರುವ ಮಲಯಾಳಂ ಭಾಷೆ ಹಲವರಲ್ಲಿ ಇರಿಸು-ಮುನಿಸು ಮೂಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರತ ಕೇರಳ ಮೂಲದ ದಾದಿಯರು ಇನ್ನು ಮುಂದೆ ಆಸ್ಪತ್ರೆಯಲ್ಲಿ ಮಲಯಾಳಂ ಭಾಷೆ ಬಳಸುವಂತಿಲ್ಲ ಎಂದು ರಾಷ್ಟ್ರ ರಾಜಧಾನಿ ನವದೆಹಲಿಯ ಸರ್ಕಾರಿ ಆಸ್ಪತ್ರೆ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆಸ್ಪತ್ರೆಯಲ್ಲಿ ದಾದಿಯರು ಬಳಸುತ್ತಿರುವ ಮಲಯಾಳಂ ಭಾಷೆ ಹಲವರಲ್ಲಿ ಇರಿಸು-ಮುನಿಸು ಮೂಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರತ ಕೇರಳ ಮೂಲದ ದಾದಿಯರು ಇನ್ನು ಮುಂದೆ ಆಸ್ಪತ್ರೆಯಲ್ಲಿ ಮಲಯಾಳಂ ಭಾಷೆ ಬಳಸುವಂತಿಲ್ಲ ಎಂದು ರಾಷ್ಟ್ರ ರಾಜಧಾನಿ ನವದೆಹಲಿಯ ಸರ್ಕಾರಿ ಆಸ್ಪತ್ರೆ ಸೂಚನೆ ನೀಡಿದೆ. 

ಈ ಸಂಬಂಧ ದೆಹಲಿ ಸರ್ಕಾರಿ ಆಸ್ಪತ್ರೆ ಸುತ್ತೋಲೆಯನ್ನು ಹೊರಡಿಸಿದ್ದು, ಆಸ್ಪತ್ರೆಯಲ್ಲಿ ದಾಖಲಾಗುವ ಬಹುತೇಕ ರೋಗಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಈ ಭಾಷೆ ತಿಳಿದಿಲ್ಲ. ಹಾಗಾಗಿ ಕರ್ತವ್ಯ ನಿರತ ಕೇರಳ ಮೂಲದ ದಾದಿಯರು ಮಲಯಾಳಂ ಬದಲು ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲೇ ಸಂವಹನ ಮಾಡುವಂತೆ ಆದೇಶಿಸಲಾಗಿದೆ.

ಗೋವಿಂದ್ ವಲ್ಲಭ್ ಪಂತ್ ಇನ್ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜಿಐಪಿಎಂಇಆರ್) ಸುತ್ತೋಲೆ ಹೊರಡಿಸಿದ್ದು, 'ದಾದಿಯರು ಸಂವಹನಕ್ಕಾಗಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸುವಂತೆ ತಿಳಿಸಲಾಗಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾದಿತು' ಎಂದು ಎಚ್ಚರಿಸಿದೆ.

ಜಿಐಪಿಎಂಇಆರ್ ಆಸ್ಪತ್ರೆಯಲ್ಲಿ ಕೆಲಸದ ಸಮಯದಲ್ಲಿ ಸಂವಹನಕ್ಕಾಗಿ ಮಲಯಾಳಂ ಭಾಷೆಯನ್ನೇ ಬಳಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಬಹುತೇಕ ರೋಗಿಗಳು ಹಾಗೂ ಸಹೋದ್ಯೋಗಿಗಳಿಗೆ ಈ ಭಾಷೆ ತಿಳಿದಿಲ್ಲ. ಇದರಿಂದ ಅಸಹಾಯಕರಾಗಿದ್ದು, ಬಹಳಷ್ಟು ಅನಾನುಕೂಲತೆಯಾಗುತ್ತಿದೆ ಎಂದು ತಿಳಿಸಿದೆ.

ಈ ನಡುವೆ ದೆಹಲಿ ಸರ್ಕಾರಿ ಆಸ್ಪತ್ರೆಯ ಸುತ್ತೋಲೆಯ ವಿರುದ್ಧ ಮಲಯಾಳಂ ಶುಶ್ರೂಷಕರ ಸಂಘದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಕೇರಳ ಮೂಲದ ದಾದಿಯರು ಸೇವೆ ಸಲ್ಲಿಸುತ್ತಿದ್ದಾರೆ. ಮಲಯಾಳಂ ಅವರ ಮಾತೃಭಾಷೆ ಎಂದು ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com