ಮುಂಬೈ ಕಟ್ಟಡ ಕುಸಿತ: ಗುತ್ತಿಗೆದಾರನ ಬಂಧನ

ಮಾಲ್ವಾನಿಯಲ್ಲಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ರಂಜಾನ್ ಶೇಕ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಟ್ಟಡ ಕುಸಿತ
ಕಟ್ಟಡ ಕುಸಿತ

ಮುಂಬೈ: ಮಾಲ್ವಾನಿಯಲ್ಲಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ರಂಜಾನ್ ಶೇಕ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ರಾತ್ರಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಕಟ್ಟಡದ ಮಾಲೀಕ ರಫೀಕ್ ಸಿದ್ದಿಕಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮುಂಬೈ ಹೊರವಲಯ ಮಾಲ್ವಾನಿಯಲ್ಲಿನ ಮೂರು ಅಂತಸ್ತಿನ ವಸತಿ ಕಟ್ಟಡ ಅದಕ್ಕೆ ಹೊಂದಿಕೊಂಡಂತಿದ್ದ ಏಕ ಅಂತಸ್ತಿನ ಕಟ್ಟದ ಮೇಲೆ ಕುಸಿದಿದ್ದರಿಂದ ಎಂಟು ಮಕ್ಕಳು ಸೇರಿದಂತೆ 11 ಮಂದಿ ದುರ್ಮರಣ ಹೊಂದಿದ್ದರು. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com