ಡೊಮಿನಿಕಾದಲ್ಲಿ ವಿಚಾರಣೆ ಮುಗಿಯುವವರೆಗೆ ಮೆಹುಲ್ ಚೋಕ್ಸಿ ಭಾರತಕ್ಕೆ ಮರಳಲ್ಲ: ವಕೀಲ

ಡೊಮಿನಿಕಾದಲ್ಲಿ ವಿಚಾರಣೆ ಮುಗಿಯುವವರೆಗೂ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದಿಲ್ಲ ಎಂದು ಚೋಕ್ಸಿ ಪರ ವಕೀಲ ಹೇಳಿದ್ದಾರೆ.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ನವದೆಹಲಿ: ಡೊಮಿನಿಕಾದಲ್ಲಿ ವಿಚಾರಣೆ ಮುಗಿಯುವವರೆಗೂ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದಿಲ್ಲ ಎಂದು ಚೋಕ್ಸಿ ಪರ ವಕೀಲ ಹೇಳಿದ್ದಾರೆ.

"ಡೊಮಿನಿಕಾದಲ್ಲಿ ಅವರ ವಿಚಾರಣೆ ಮುಗಿಯುವವರೆಗೆ  ಅವರನ್ನು (ಮೆಹುಲ್ ಚೋಕ್ಸಿ) ಭಾರತಕ್ಕೆ ವಾಪಸ್ ಕಳುಹಿಸಲಾಗುವುದಿಲ್ಲ. ಡೊಮಿನಿಕನ್ ಕೋರ್ಟ್ ನಲ್ಲಿ  ಮತ್ತೆ ಜಾಮೀನು ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ನಮಗೆ ನೀಡಲಾಗಿದೆ. "ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದರು.

ಪರಾರಿಯಾದ ಉದ್ಯಮಿ ಮೆಹುಲ್ ಚೋಕ್ಸಿಗೆ ದೊಡ್ಡ ಹಿನ್ನಡೆಯಾಗುವಂತೆ ಅಲ್ಲಿನ ಹೈಕೋರ್ಟ್ ಅವರ ಜಾಮೀನು ನಿರಾಕರಿಸಿತ್ತು. ತನ್ನ ಸಹೋದರನೊಂದಿಗೆ ಹೋಟೆಲ್‌ನಲ್ಲಿ ಉಳಿಯುವುದಾಗಿ ಚೋಕ್ಸಿ ಹೇಗೆ ನಿರ್ಧರಿಸಿದ್ದಾರೆಂದು ಡೊಮಿನಿಕಾ ಹೈಕೋರ್ಟ್ ಪ್ರಶ್ನಿಸಿದೆಆದರೆ ಅದು ಸ್ಥಿರ ವಿಳಾಸವಲ್ಲ. ಅವರ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ ಎಂದು ನ್ಯಾಯಾಲಯ ಕಂಡುಕೊಂಡಿದೆ.

ಡೊಮಿನಿಕಾ ಹೈಕೋರ್ಟ್‌ನ ನ್ಯಾಯಾಧೀಶ ವಿನಾಂಟೆ ಆಡ್ರಿಯನ್-ರಾಬರ್ಟ್ಸ್ ಅವರು ಎರಡೂ ಕಡೆಯವರು ಸಲ್ಲಿಸಿದ ದಾಖಲೆಗಳ ಪರಿಶೀಲನೆ ನಂತರ ಮೆಹುಲ್ ಚೋಕ್ಸಿಗೆ ಜಾಮೀನು ನೀಡದಿರಲು ನಿರ್ಧರಿಸಿದರು. ಜಾಮೀನು ಕೋರಿ ಮೆಹುಲ್ ಚೋಕ್ಸಿ ಅವರು ನ್ಯಾಯಾಲಯದ ಮುಂದೆ ಯಾವುದೇ ಬಲವಾದ ಕಾರಣ  ನೀಡಲಿಲ್ಲ ಮತ್ತು ಅವರು ಫ್ಲೈಯಿಂಗ್ ಭಯದ ಬಗ್ಗೆ ಹೇಳಿರುವುದು ಗಮನಾರ್ಹ ಎಂದು ಆಂಟಿಗುವಾ ನ್ಯೂಸ್ ರೂಂ ವರದಿ ಮಾಡಿದೆ. 

ಪ್ರಸ್ತುತ, ಚೋಕ್ಸಿಗೆ ಡೊಮಿನಿಕನ್ ನ್ಯಾಯಾಲಯವು ಭಾರತಕ್ಕೆ ತಕ್ಷಣ ವಾಪಸಾಗುವುದರಿಂದ ಮಧ್ಯಂತರ ಪರಿಹಾರವನ್ನು ನೀಡಿದೆ.

ಡೊಮಿನಿಕಾ ಪ್ರಧಾನಿ ರೂಸ್‌ವೆಲ್ಟ್ ಸ್ಕೆರಿಟ್ ಚೋಕ್ಸಿಯನ್ನು "ಭಾರತೀಯ ಪ್ರಜೆ" ಎಂದು ಕರೆದ ಕೆಲವೇ ದಿನಗಳ ನಂತರ ನ್ಯಾಯಾಲಯದ ತೀರ್ಪು ಬಂದಿದೆ. ಚೋಕ್ಸಿ ಮೇ 23 ರಂದು ಆಂಟಿಗುವಾದಿಂದ ನಾಪತ್ತೆಯಾಗಿದ್ದರು  ಮತ್ತು ಶೀಘ್ರದಲ್ಲೇ ಡೊಮಿನಿಕಾದಲ್ಲಿ ಸಿಕ್ಕಿಬಿದ್ದಿದ್ದರು. ಭಾರತಕ್ಕೆ ಹಸ್ತಾಂತರ ಆಗುವುದನ್ನು ತಪ್ಪಿಸುವ ಸಂಭವನೀಯ ಪ್ರಯತ್ನದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ತಪ್ಪಿಸಿಕೊಂಡ ಆರೋಪದ ಮೇಲೆ ಡೊಮಿನಿಕಾದಲ್ಲಿ ಪೊಲೀಸರು ಅಕ್ರಮ ಪ್ರವೇಶ ಆರೋಪದಡಿ ಬಂಧಿಸಿದ್ದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಯಲ್ಲಿ 13,500 ಕೋಟಿ ರೂ.ಗಳ ವಂಚನೆಗೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಚೋಕ್ಸಿ ಪರಾರಿಯಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com