ಐಟಿ ನಿಯಮ ಪಾಲಿಸಲು ಟ್ವೀಟರ್ ವಿಫಲ; ಉದ್ದೇಶಪೂರ್ವಕವಾಗಿಯೇ ಅನುಸರಿಸದಿರಲು ನಿರ್ಧರಿಸಿದಂತಿದೆ: ರವಿಶಂಕರ್ ಪ್ರಸಾದ್

ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದೆ. ಅನೇಕ ಅವಕಾಶಗಳನ್ನು ನೀಡಿದ್ದರೂ ಉದ್ದೇಶಪೂರ್ವಕವಾಗಿ ಪಾಲಿಸದಿರುವ ನಿರ್ಧಾರವನ್ನು ತೆಗೆದುಕೊಂಡಂತಿದೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್

ನವದೆಹಲಿ: ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದೆ. ಅನೇಕ ಅವಕಾಶಗಳನ್ನು ನೀಡಿದ್ದರೂ ಉದ್ದೇಶಪೂರ್ವಕವಾಗಿ ಪಾಲಿಸದಿರುವ ನಿರ್ಧಾರವನ್ನು ತೆಗೆದುಕೊಂಡಂತಿದೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಹೊಸ ಐಟಿ ನಿಯಮ ಪಾಲಿಸದ ಬಗ್ಗೆ ಕೂನಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಪ್ರಸಾದ್, ತಮ್ಮನ್ನು ತಾವು ವಾಕ್ಚಾತುರ್ಯದ ಧ್ವಜ ಧಾರಕ ಎಂದು ಬಿಂಬಿಸಿಕೊಳ್ಳುವ ಟ್ವಿಟರ್, ಮಧ್ಯವರ್ತಿ ಮಾರ್ಗಸೂಚಿಗಳಿಗೆ ಬಂದಾಗ ಉದ್ದೇಶಪೂರ್ವಕವಾಗಿ ಧಿಕ್ಕರಿಸುವ ಮಾರ್ಗವನ್ನು ಆರಿಸಿಕೊಳ್ಳುವುದು ಆಶ್ಚರ್ಯಕರವಾಗಿದೆ ಎಂದು ಬರೆದುಕೊಂಡಿದ್ದಾರೆ. 

'ಸುರಕ್ಷಿತ ಬಂದರು ನಿಬಂಧನೆಗೆ ಟ್ವಿಟರ್‌ಗೆ ಅರ್ಹತೆ ಇದೆಯೇ ಎಂಬ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ. ಆದಾಗ್ಯೂ, ಈ ವಿಷಯವಾಗಿ ಹೇಳಬೇಕೆಂದರೆ ಮೇ 26ರಿಂದ ಜಾರಿಗೆ ಬಂದ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ನಿಯಮಗಳನ್ನು ಅನುಸರಿಸಲು ಟ್ವಿಟರ್‌ಗೆ ಅನೇಕ ಅವಕಾಶಗಳನ್ನು ನೀಡಲಾಗಿದೆ ಎಂದು ಪ್ರಸಾದ್ ಪ್ರತಿಪಾದಿಸಿದರು. ಆದರೆ ಉದ್ದೇಶಪೂರ್ವಕವಾಗಿ ಪಾಲಿಸದಿರುವ ಹಾದಿಯನ್ನು ಆರಿಸಿಕೊಂಡಿದೆ ಎಂದರು. 

Ravi Shankar Prasadgi@ravishankarprasad
There are numerous queries arising as to whether Twitter is entitled to safe harbour provision. However, the simple fact of the matter is that Twitter has failed to comply with the Intermediary Guidelines that came into effect from the 26th of May. Further, it was given multiple opportunities to comply with the same, however it has deliberately chosen the path of non compliance.(1/7)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com