ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವೈಯಕ್ತಿಕ ಖಾತೆಯನ್ನು 1 ಗಂಟೆ ಕಾಲ ನಿರ್ಬಂಧಿಸಿದ್ದ ಟ್ವೀಟರ್!

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ವೈಯಕ್ತಿಕ ಖಾತೆಯನ್ನು ಟ್ವಿಟರ್ ಸುಮಾರು 1 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು.
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್

ನವದೆಹಲಿ: ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ವೈಯಕ್ತಿಕ ಖಾತೆಯನ್ನು ಟ್ವಿಟರ್ ಸುಮಾರು 1 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು. 

ಟಿವಿ ಚರ್ಚೆಗಳ ತುಣುಕುಗಳನ್ನು ಪೋಸ್ಟ್ ಮಾಡುವ ಮೂಲಕ ಟ್ವೀಟರ್ ಕಾಪಿರೈಟ್ ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಟ್ವೀಟರ್ ನನ್ನ ಖಾತೆಯನ್ನು ಒಂದು ಗಂಟೆ ಕಾಲ ನಿರ್ಬಂಧಿಸಿ, ನಂತರ ಅನ್ ಲಾಕ್ ಮಾಡಿತ್ತು ಎಂದು ರವಿಶಂಕರ್ ಪ್ರಸಾದ್ ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ. 

ಮತ್ತೊಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಸರಣಿ ಪೋಸ್ಟ್‌ ಮಾಡಿದ ಪ್ರಸಾದ್, ಟ್ವಿಟರ್‌ನ ಕ್ರಮವು ಐಟಿ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ, ಏಕೆಂದರೆ ವೇದಿಕೆಯು ತನ್ನ ಖಾತೆಗೆ ಪ್ರವೇಶವನ್ನು ನಿರಾಕರಿಸುವ ಮೊದಲು ಪೂರ್ವ ಸೂಚನೆ ನೀಡಲು ವಿಫಲವಾಗಿದೆ. ಎಚ್ಚರಿಕೆಯ ನಂತರ ಖಾತೆಯನ್ನು ಅನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

Friends! Something highly peculiar happened today. Twitter denied access to my account for almost an hour on the alleged ground that there was a violation of the Digital Millennium Copyright Act of the USA and subsequently they allowed me to access the account. pic.twitter.com/WspPmor9Su

ರವಿಶಂಕರ್ ಪ್ರಸಾದ್ ಅವರು ಕೂ ನಲ್ಲಿ, ಟ್ವಿಟರ್ ಈ ದರ್ಪ ಮತ್ತು ಅನಿಯಂತ್ರಿತ ಕ್ರಮಗಳ ಕುರಿತು ನಾನು ವಿಶೇಷವಾಗಿ ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾದ ನನ್ನ ಸಂದರ್ಶನಗಳ ತುಣುಕುಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಅದಕ್ಕೆ ಸರಿಯಾಗಿಯೇ ನಾಟಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com