ಯಾಸ್ ಚಂಡ ಮಾರುತ: 25 ರೈಲುಗಳ ಪ್ರಯಾಣ ರದ್ದು

ಕೇವಲ ಎರುಡು ವಾರದ ಅವಧಿಯಲ್ಲಿ ದೇಶ ಎರಡು ಚಂಡಮಾರುತದ ಪರಿಣಾಮ ಎದುರಿಸಬೇಕಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇವಲ ಎರುಡು ವಾರದ ಅವಧಿಯಲ್ಲಿ ದೇಶ ಎರಡು ಚಂಡಮಾರುತದ ಪರಿಣಾಮ ಎದುರಿಸಬೇಕಾಗಿದೆ. ಕಳೆದವಾರ ತೌಕ್ತೆ  ಚಂಡಮಾರುತ ಸೃಷ್ಟಿ ಮಾಡಿದ ಅನಾಹುತ  ಹಾನಿ,  ಜನರ ಮನಸ್ಸಿನಿಂದ ದೂರವಾಗುವ ಮುನ್ನವೇ ಮತ್ತೊಂದು ಚಂಡಮಾರುತದ ಬೀತಿ  ಎದುರಾಗಿದೆ. 

ಯಾಸ್ ಚಂಡಮಾರುತದಿಂದಾಗಿ ಇಂದಿನಿಂದ ಬರುವ 29ರ ವರೆಗೆ  25 ರೈಲು ಪ್ರಯಾಣ  ರದ್ದು ಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ಹೇಳಿದೆ. ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ನಂತರ ತೀವ್ರ ಚಂಡಮಾರುತವಾಗಿದೆ.
ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹವಾಮಾನ ಇಲಾಖೆಯ ಹೇಳಿದೆ. 

ಯಾಸ್ ಚಂಡಮಾರುತ ಇದೇ  26 ರಂದು   ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ.  ಚಂಡಮಾರುತ ಗಾಳಿಯ ವೇಗವು ಗಂಟೆಗೆ ಸುಮಾರು 155-165 ಕಿ.ಮೀ. ಎಂದು ಐಎಂಡಿ ಊಹಿಸಿತ್ತು, ಇದು ಗಂಟೆಗೆ 185 ಕಿ.ಮೀ. ವೇಗದಲ್ಲಿ ಬೀಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com