ತನ್ನ ಕೋವಿಡ್-19 ನಿರೋಧಕ ಮಾತ್ರೆ ಶೇ.89ರಷ್ಟು ಪರಿಣಾಮಕಾರಿ: ಫೈಜರ್

ಫೈಜರ್ ಸಂಸ್ಥೆ ಸಂಶೋಧಿಸಿರುವ ಕೋವಿಡ್-19 ನಿರೋಧಕ ಮಾತ್ರೆಗಳು ಶೇ.89ರಷ್ಟು ಪರಿಣಾಮಕಾರಿ ಎಂದು ಫೈಜರ್ ಸಂಸ್ಥೆ ಹೇಳಿಕೊಂಡಿದೆ.
ಫೈಜರ್ ಮಾತ್ರೆ
ಫೈಜರ್ ಮಾತ್ರೆ

ನವದೆಹಲಿ: ಫೈಜರ್ ಸಂಸ್ಥೆ ಸಂಶೋಧಿಸಿರುವ ಕೋವಿಡ್-19 ನಿರೋಧಕ ಮಾತ್ರೆಗಳು ಶೇ.89ರಷ್ಟು ಪರಿಣಾಮಕಾರಿ ಎಂದು ಫೈಜರ್ ಸಂಸ್ಥೆ ಹೇಳಿಕೊಂಡಿದೆ.

ಫೈಜರ್ ಸಂಸ್ಥೆಯ ಮಾತ್ರೆ ಕೊರೊನಾ ವಿರುದ್ಧ ಶೇ. 89ರಷ್ಟು ಪರಿಣಾಮಕಾರಿಯಾಗಿದ್ದು, ಕೊರೊನಾ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಇದು ತಡೆಯುತ್ತದೆ ಎಂದು ಹೇಳಿದೆ. ಹೈ ರಿಸ್ಕ್ ರೋಗಿಗಳಲ್ಲಿ ಶೇ.89ರಷ್ಟು ಸಾವನ್ನು ಈ ಮಾತ್ರೆ ತಡೆಯುತ್ತದೆ. ಫೈಜರ್ ಮಾತ್ರೆಯಿಂದ ಕೊರೊನಾ ರೋಗಿಗಳ ಚಿಕಿತ್ಸೆ ಸುಲಭ. ಇನ್ಮುಂದೆ ಮಾತ್ರೆಗಳ ವೈದ್ಯಕೀಯ ಪರೀಕ್ಷೆ ನಡೆಸಲ್ಲ ಎಂದು ಫೈಜರ್ ಹೇಳಿಕೆ ನೀಡಿದೆ.

ಅಲ್ಲದೆ ತುರ್ತು ಬಳಕೆಗೆ ಅನುಮತಿ ಕೋರಿ ಡಾಟಾ ಸಲ್ಲಿಕೆಗೆ ಫೈಜರ್ ಸಂಸ್ಥೆ ನಿರ್ಧಾರ ಮಾಡಿದ್ದು, ಮಾತ್ರೆಯ ಡಾಟಾ ಅಮೆರಿಕದ ಡ್ರಗ್ಸ್ ರೆಗ್ಯುಲೇಟರ್‌ಗೆ ಸಲ್ಲಿಸಲಾಗಿದೆ ಎಂದು ಹೇಳಿದೆ. ಫೈಜರ್ ಸಂಸ್ಥೆಯಿಂದ ಕೊರೊನಾ ವಿರುದ್ಧ ಮಾತ್ರೆ ಅಭಿವೃದ್ಧಿಪಡಿಸಲಾಗಿದೆ. ಮಾತ್ರೆ ಅಭಿವೃದ್ಧಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಫೈಜರ್ ಕಂಪನಿಯ ಷೇರುಗಳ ಬೆಲೆಯಲ್ಲಿ ಶೇಕಡಾ 11ರಷ್ಟು ಏರಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ.

ಮಾತ್ರೆ ಸೇವನೆ ಹೇಗೆ?
ರೋಗ ಲಕ್ಷಣ ಕಂಡು ಬಂದ‌ 3 ದಿನಗಳಲ್ಲಿ ಮಾತ್ರೆ ಸೇವಿಸಬೇಕು. ಐದು ದಿನಗಳಲ್ಲಿ 30 ಮಾತ್ರೆಗಳನ್ನು ನೀಡಬೇಕಾಗುತ್ತದೆ. HIVಯ ಹಳೆಯ ಔಷಧ ಜೊತೆ ಮಾತ್ರೆ ನೀಡಬೇಕು ಎಂದು ತಿಳಿಸಲಾಗಿದೆ. ವಿವಿಧ ವೈರಸ್​ಗಳಿಗೆ ಒಂದೇ ರೀತಿಯಾಗಿದ್ದ ಆಂಟಿ ವೈರಲ್‌ ಡ್ರಗ್ ಬಳಸುತ್ತಾರೆ. ಫೈಜರ್ ಮಾತ್ರೆ ಹೆಚ್ಚು ದೇಹದಲ್ಲಿ ಸಕ್ರೀಯವಾಗಲು ಹೆಚ್​ಐವಿ ಔಷಧಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com