ಕೋವ್ಯಾಕ್ಸಿನ್
ಕೋವ್ಯಾಕ್ಸಿನ್

WHO ಮನ್ನಣೆ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆಯ ಬಳಕೆಯ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮನ್ನಣೆ ದೊರೆತ ಬೆನ್ನಲ್ಲೇ ಇತ್ತ ಕೇಂದ್ರ ಸರ್ಕಾರ ಲಸಿಕೆಯ ಅವಧಿಯನ್ನು 12 ತಿಂಗಳಿಗೆ ವಿಸ್ತರಿಸಿದೆ.

ನವದೆಹಲಿ: ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮನ್ನಣೆ ದೊರೆತ ಬೆನ್ನಲ್ಲೇ ಇತ್ತ ಕೇಂದ್ರ ಸರ್ಕಾರ ಲಸಿಕೆಯ ಅವಧಿಯನ್ನು 12 ತಿಂಗಳಿಗೆ ವಿಸ್ತರಿಸಿದೆ.

ಹೌದು.. ಇಂದು ಭಾರತ್ ಬಯೋಟೆಕ್ ಸಂಸ್ಥೆ ದೀಪಾವಳಿ ಹಬ್ಬದ ಬಂಪರ್ ಉಡುಗೊರೆ ದೊರೆತಿದ್ದು, ಒಂದೆಡೆ ವಿಶ್ವ ಆರೋಗ್ಯ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗೆ ಸೇರಿಸಿದ್ದು ಮತ್ತೊಂದೆಡೆ ಭಾರತ ಸರ್ಕಾರ ಕೋವ್ಯಾಕ್ಸಿನ್ ಲಸಿಕೆಯ ಶೆಲ್ಫ್ ಲೈಫ್ ವಿಸ್ತರಣೆಗೆ ಅನುಮೋದನೆ ನೀಡಿದ್ದು, ಅಂದರೆ ಬಳಕೆಯ ಅವಧಿಯನ್ನು 12 ತಿಂಗಳಿಗೆ ಏರಿಕೆ ಮಾಡಿದೆ. 

ಈ ಕುರಿತು ಮಾಹಿತಿ ನೀಡಿರುವ ಭಾರತ್ ಬಯೋಟೆಕ್, ಕೋವ್ಯಾಕ್ಸಿನ್ ಲಸಿಕೆಯನ್ನು 24 ತಿಂಗಳ ವರೆಗೆ ವಿಸ್ತರಣೆ ಮಾಡುವಂತೆ ಸಿಡಿಎಸ್‌ಸಿಒಗೆ ದಾಖಲೆಗಳನ್ನು ನೀಡಿದ್ದೆವು. ಆದರೆ, ಕೇಂದ್ರಿಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) 12 ತಿಂಗಳಿಗೆ ವಿಸ್ತರಣೆ ಮಾಡಿ ಅನುಮೋದನೆ ನೀಡಿದೆ ಎಂದು ತಿಳಿಸಿದೆ. 

ಸದ್ಯ ಭಾರತ್ ಬಯೋಟೆಕ್ ಉತ್ಪಾದಿಸುವ ಕೋವಿಡ್ ಲಸಿಕೆ 6 ತಿಂಗಳು ಮಾತ್ರ ಶೆಲ್ಪ್ ಲೈಫ್ ಹೊಂದಿತ್ತು. ಈಗ ನೂತನವಾಗಿ 12 ತಿಂಗಳವರೆಗೆ ವಿಸ್ತರಣೆ ಮಾಡಿ ಸಿಡಿಎಸ್‌ಸಿಒ ಅನುಮೋದನೆ ನೀಡಿದೆ.

ಇನ್ನು ಕೋವ್ಯಾಕ್ಸಿನ್ ಲಸಿಕೆಯೂ ಕೋವಿಡ್-19ರ ವಿರುದ್ಧ ಶೇಕಡಾ 77.8ರಷ್ಟು ಪರಿಣಾಮಕಾರಿಯಾಗಿದೆ. ಹಾಗೂ ಡೆಲ್ಟಾ ರೂಪಾಂತರಿ ವೈರಸ್ ವಿರುದ್ಧ ಶೇಕಡಾ 65.2ರಷ್ಟು ಪ್ರತಿರೋಧ ಒಡ್ಡುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿತ್ತು.

Related Stories

No stories found.

Advertisement

X
Kannada Prabha
www.kannadaprabha.com