ಮುಕೇಶ್ ಅಂಬಾನಿ ಕುಟುಂಬ ಲಂಡನ್ ನಲ್ಲಿ ನೆಲೆಸುವುದಿಲ್ಲ: ರಿಲಾಯನ್ಸ್ ಸ್ಪಷ್ಟನೆ
ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬವು ಇನ್ನು ಮುಂದೆ ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ಭಾಗಶಃ ನೆಲೆಸಲಿದೆ ಎಂಬ ವರದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಲ್ಲಗಳೆದಿದೆ.
Published: 06th November 2021 09:28 AM | Last Updated: 06th November 2021 09:28 AM | A+A A-

ಮುಖೇಶ್ ಅಂಬಾನಿ
ದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬವು ಇನ್ನು ಮುಂದೆ ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ಭಾಗಶಃ ನೆಲೆಸಲಿದೆ ಎಂಬ ವರದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಲ್ಲಗಳೆದಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಲಂಡನ್‌ನ ಬಕಿಂಗ್‌ಹ್ಯಾಮ್‌ಶೈರ್‌ನ ಸ್ಟೋಕ್ ಪಾರ್ಕ್ ಎಸ್ಟೇಟ್ ಖರೀದಿಸಿದ್ದು, ಅಂಬಾನಿ ಕುಟುಂಬವು ಅಲ್ಲಿ ನೆಲೆಸಲಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು.
ಸಾಮಾಜಿಕ ಮಾಧ್ಯಮಗಳಲ್ಲೂ ಈ ಕುರಿತು ಸಂದೇಶಗಳು ಹರಿದಾಡಿದ್ದವು. ಈ ವಿಚಾರವಾಗಿ ಕಂಪನಿಯು ಸ್ಪಷ್ಟನೆ ನೀಡಿ ಪ್ರಕಟಣೆ ಬಿಡುಗಡೆ ಮಾಡಿದೆ. ‘ರಿಲಯನ್ಸ್ ಸಮೂಹ ಸಂಸ್ಥೆಯು ಸ್ಟೋಕ್ ಪಾರ್ಕ್ ಎಸ್ಟೇಟ್ ಖರೀದಿಸಿದ್ದು ನಿಜ.
ಇದನ್ನು ಸ್ಥಳೀಯ ಯೋಜನಾ ಮಾರ್ಗಸೂಚಿ, ನಿಯಂತ್ರಣಗಳಿಗೆ ಒಳಪಟ್ಟು ಗಾಲ್ಫಿಂಗ್ ಹಾಗೂ ಕ್ರೀಡಾ ರೆಸಾರ್ಟ್ ಆಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಖರೀದಿಸಲಾಗಿದೆ. ಈ ಸ್ವಾಧೀನವು ರಿಲಯನ್ಸ್ ಸಮೂಹದ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ. ಇದು ಭಾರತದ ಆತಿಥ್ಯ ಉದ್ಯಮದ ಹೆಜ್ಜೆಗುರುತನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.