ವಂಚನೆ!
ವಂಚನೆ!

86 ಲಕ್ಷ ರೂ. ವಂಚನೆ ಪ್ರಕರಣ: ಬ್ಯಾಂಕ್ ಉದ್ಯೋಗಿ ಸೇರಿ ಮೂರು ಮಂದಿ ಬಂಧನ

ಕ್ರಿಪ್ಟೋ ಟ್ರೇಡಿಂಗ್ ನಲ್ಲಿ ಹೂಡಿಕೆಯ ಸೋಗಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಮೂವರು ವಂಚಕರನ್ನು ಹೈದರಾಬಾದ್ ನ ಪೊಲೀಸರು ಬಂಧಿಸಿದ್ದಾರೆ. 

ಹೈದರಾಬಾದ್: ಕ್ರಿಪ್ಟೋ ಟ್ರೇಡಿಂಗ್ ನಲ್ಲಿ ಹೂಡಿಕೆಯ ಸೋಗಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಮೂವರು ವಂಚಕರನ್ನು ಹೈದರಾಬಾದ್ ನ ಪೊಲೀಸರು ಬಂಧಿಸಿದ್ದಾರೆ.  

ಬಂಧಿತರ ಪೈಕಿ ಓರ್ವ ಪಶ್ಚಿಮ ಬಂಗಾಳ ಮೂಲದವನಾಗಿದ್ದು ಬ್ಯಾಂಕ್ ಉದ್ಯೋಗಿಯಾಗಿದ್ದ. ಗುತ್ತಿಗೆದಾರರೊಬ್ಬರಿಗೆ 86 ಲಕ್ಷ ರೂಪಾಯಿಗಳನ್ನು ಕ್ರಿಪ್ಟೋ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡುವ ಸೋಗಿನಲ್ಲಿ ವಂಚಿಸಿದ್ದರು.

ಪ್ರಮುಖ ಆರೋಪಿ ದೀಪು ಮೊಂಡಲ್ ಕಣ್ಮರೆಯಾಗಿದ್ದು, ಈತ ವಂಚನೆ ಮಾಡುವ ಉದ್ದೇಶದಿಂದ ಯಾವುದೇ ರೀತಿ ಕಾರ್ಯನಿರ್ವಹಣೆ ಮಾಡದ 14 ಶೆಲ್ ಕಂಪನಿಗಳನ್ನು ಪ್ರಾರಂಭಿಸಿದ್ದ. ಅದಾಗಲೇ ಬಂಧನಕ್ಕೆ ಒಳಗಾಗಿದ್ದ ನೂರ್ ಅಲಮ್ ಹಕ್, ಎಕ್ರಾಮ್ ಹುಸೇನ್, ಮೊಹಮ್ಮದ್ ಇಜಾರುಲ್ ಅವರೊಂದಿಗೆ ಸೇರಿ ಈ ಕಂಪನಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದವು.

ಆರೋಪಿಗಳು ಬಳಕೆ ಮಾಡುತ್ತಿದ್ದ, 50 ಲಕ್ಷ ಠೇವಣಿ ಇದ್ದ ಬ್ಯಾಂಕ್ ಖಾತೆಯ ವಹಿವಾಟುಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಮೊಬೈಲ್ ಫೋನ್, ಸಿಮ್ ಕಾರ್ಡ್ ಹಾಗೂ ಆರೋಪಿಗಳು ಬಳಕೆ ಮಾಡುತ್ತಿದ್ದ ಇತರ ಉತ್ಪನ್ನಗಳನ್ನು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಹೇಳಿದ್ದಾರೆ. 

ಮೊಂಡಲ್ ಕ್ರಿಪ್ಟೋ ಟ್ರೇಡಿಂಗ್ ಹೆಸರಿನಲ್ಲಿ ಶೆಲ್ ಕಂಪನಿಗಳನ್ನು ಪ್ರಾರಂಭಿಸಿ, ಹೂಡಿಕೆಯ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ಹಾಗೂ ನಂತರ ಆ ಹಣವನ್ನು ಕ್ರಿಪ್ಟೋ ಕರೆನ್ಸಿ ಖರೀದಿಗೆ ಬಳಕೆ ಮಾಡುತ್ತಿದ್ದ. ನೂರ್ ಅಲಮ್ ಹಕ್ ಎಂಬ ಬ್ಯಾಂಕ್ ಉದ್ಯೋಗಿ ಆತನಿಗೆ 64 ವಿವಿಧ ಬ್ಯಾಂಕ್ ಖಾತೆಗಳನ್ನು ಪ್ರಾರಂಭಿಸುವುದಕ್ಕಾಗಿ ಸಹಾಯ ಮಾಡಿದ್ದ, ಶಿಕ್ಷಣ ಇಲ್ಲದ ಗ್ರಾಮಸ್ಥರ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನ್ನು ಮೊಂಡಲ್ ಗೆ ನೀಡುತ್ತಿದ್ದ. ಅಷ್ಟೇ ಅಲ್ಲದೇ ಕಡಿಮೆ ಮೊತ್ತದ ಕಮಿಷನ್ ಆಮಿಷವೊಡ್ಡಿ ಗ್ರಾಮಸ್ಥರಿಂದ ಎಟಿ ಎಂ ಕಾರ್ಡ್, ಚೆಕ್ ಬುಕ್, ಇಂಟರ್ ನೆಟ್ ಬ್ಯಾಂಕಿಂಗ್ ವಿವರಗಳನ್ನು ಪಡೆಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡೇಟಾವನ್ನು ಬಲಿಪಶುಗಳಿಂದ ವರ್ಗಾವಣೆ ಮಾಡಲಾಗುತ್ತಿದ್ದ ಹಣವನ್ನು ಠೇವಣಿ ಇಡುವುದಕ್ಕೆ ಬಳಕೆ ಮಾಡಲಾಗುತ್ತಿತ್ತು. ಒಮ್ಮೆ ಹಣ ಆರೋಪಿಗಳ ಕೈಗೆ ಸೇರುತ್ತಿದ್ದಂತೆಯೇ ಅವರು ಅದನ್ನು ಝೆಬ್ ಪೇ ಎಂಬ ಆಪ್ ಮೂಲಕ ಕ್ರಿಪ್ಟೋ ಕರೆನ್ಸಿ ಬಳಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಕಾರ್ಯವಿಧಾನವನ್ನು ಇಟ್ಟುಕೊಂಡು ವಾಟ್ಸ್ ಆಪ್ ಮೂಲಕ ವರ್ಚ್ಯುಯಲ್ ನಂಬರ್ ನ್ನು ಬಳಕೆ ಮಾಡಿ ಘಟ್ಕೆಸರ್  ನ ನಿವಾಸಿಯೊಬ್ಬರನ್ನು ಸಂಪರ್ಕಿಸಿ ಕ್ರಿಪ್ಟೋ ಹೂಡಿಕೆಗೆ ಆಮಿಷವೊಡ್ಡಿದ್ದಾರೆ. ಮೊದಲ ಬಾರಿಗೆ 50,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದ ಆತ 10,000 ರೂಪಾಯಿ ಲಾಭ ಗಳಿಸಿದ್ದಾರೆ. ಮುಂದಿನ ಬಾರಿ ಇನ್ನೂ ಹೆಚ್ಚಿನ ಹೂಡಿಕೆಗೆ ಆರೋಪಿಗಳು ಆತನಿಗೆ ಆಮಿಷವೊಡ್ಡಿದ್ದಾರೆ. 

ಅತ್ಯಂತ ಕಡಿಮೆ ಅವಧಿಯಲ್ಲಿ 86 ಲಕ್ಷ ರೂಪಾಯಿ ವಂಚನೆ ಮಾಡಿದ್ದರು. ತಾಂತ್ರಿಕ ಸಾಕ್ಷ್ಯದ ಆಧಾರದಲ್ಲಿ ಪೊಲೀಸರು ಸಿಲಿಗುರಿಗೆ ತೆರಳಿ ಮೂವರನ್ನು ಬಂಧಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com