
ಚೆನ್ನೈ ನಲ್ಲಿ ಜಲಾವೃತಗೊಂಡಿರುವ ರಸ್ತೆಗಳು
ಚೆನ್ನೈ: ಹಲವು ವರ್ಷಗಳ ಬಳಿಕ ಸುರಿದ ಭಾರಿ ಮಳೆಯ ಪರಿಣಾಮ ತಮಿಳುನಾಡು ರಾಜ್ಯದ ಹಲವು ಪ್ರದೇಶಗಳು ಜಲಾವೃತಗೊಂಡಿದೆ.
24 ಗಂಟೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಮೂರು ನಗರಗಳ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.
ಈಶಾನ್ಯ ಮುಂಗಾರು ಪ್ರಾರಂಭವಾದಾಗಿನಿಂದಲೂ, ಅಕ್ಟೋಬರ್ ತಿಂಗಳಲ್ಲಿ ತಮಿಳುನಾಡು, ಪುದುಚೆರಿಗಳ ಭಾಗದಲ್ಲಿ ಎಂದಿಗಿಂತಲೂ ಶೇ.43 ರಷ್ಟು ಹೆಚ್ಚು ಮಳೆಯಾಗಿದೆ.
6 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಈ ಪ್ರಮಾಣದಲ್ಲಿ ಮಳೆಯಾಗಿದೆ. ಹಲವೆಡೆ ನಗರಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ತಮಿಳುನಾಡಿಗೆ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
Spoke to Tamil Nadu CM, Thiru @mkstalin and discussed the situation in the wake of heavy rainfall in parts of the state. Assured all possible support from the Centre in rescue and relief work. I pray for everyone’s well-being and safety.
— Narendra Modi (@narendramodi) November 7, 2021
"ತಮಿಳುನಾಡು ಸಿಎಂ ಎಂ ಕೆ ಸ್ಟ್ಯಾಲಿನ್ ಅವರೊಂದಿಗೆ ಮಾತನಾಡಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಹಾರ ಕಾರ್ಯಗಳಲ್ಲಿ ಕೇಂದ್ರದಿಂದ ತಮಿಳುನಾಡಿಗೆ ಅಗತ್ಯ ಭರವಸೆ ನೀಡಲಾಗುವುದು" ಎಂದು ಮೋದಿ ಭರವಸೆ ನೀಡಿದ್ದಾರೆ.
ಇದೇ ವೇಳೆ ತಮಿಳುನಾಡು ಸಿಎಂ ಜಲಾವೃತಗೊಂಡಿರುವ ಪ್ರದೇಶಗಳನ್ನು ಹಿರಿಯ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿ, ನೀರನ್ನು ಹೊರಹಾಕುವುದಕ್ಕೆ ಕ್ಷಿಪ್ರಗತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.