ಆರ್ ಎಸ್ಎಸ್ ಮಿಲಿಟರಿ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಒಂದು ಗುಂಪು: ಮೋಹನ್ ಭಾಗವತ್
ಸಂಘವು ಮಿಲಿಟರಿ ಸಂಘಟನೆಯಲ್ಲ, ಆದರೆ “ಕೌಟುಂಬಿಕ ವಾತಾವರಣ” ಹೊಂದಿರುವ ಒಂದು ಗುಂಪು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.
Published: 28th November 2021 10:49 PM | Last Updated: 28th November 2021 10:49 PM | A+A A-

ಮೋಹನ್ ಭಾಗವತ್
ಗ್ವಾಲಿಯರ್: ಸಂಘವು ಮಿಲಿಟರಿ ಸಂಘಟನೆಯಲ್ಲ, ಆದರೆ “ಕೌಟುಂಬಿಕ ವಾತಾವರಣ” ಹೊಂದಿರುವ ಒಂದು ಗುಂಪು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.
"ಸಂಘವು ಅಖಿಲ ಭಾರತ ಸಂಗೀತ ಶಾಲೆ ಅಲ್ಲ. ಇಲ್ಲಿ ಸಮರ ಕಲೆಗಳ ಕಾರ್ಯಕ್ರಮಗಳು ನಡೆಯುತ್ತವೆ. ಸಂಘವು ಅಖಿಲ ಭಾರತ ಜಿಮ್ ಅಥವಾ ಮಾರ್ಷಲ್ ಆರ್ಟ್ಸ್ ಕ್ಲಬ್ ಅಲ್ಲ. ಕೆಲವೊಮ್ಮೆ, ಸಂಘವನ್ನು ಅರೆಸೈನಿಕ(ಪಡೆ) ಎಂದು ಕರೆಯಲಾಗುತ್ತದೆ. ಆದರೆ ಸಂಘ ಮಿಲಿಟರಿ ಸಂಘಟನೆಯಲ್ಲ’’ ಎಂದು ಹೇಳಿದರು.
ಇದನ್ನು ಓದಿ: 'ಭಾರತ' ಭಾರತವಾಗಿಯೇ ಉಳಿಯಲು ಹಿಂದೂಗಳು ಹಿಂದೂಗಳಾಗಿಯೇ ಉಳಿಯಬೇಕು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಸಂಘವು ಕೌಟುಂಬಿಕ ವಾತಾವರಣವನ್ನು ಹೊಂದಿರುವ ಒಂದು ಗುಂಪು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.
‘ಪಾಶ್ಚಿಮಾತ್ಯ ದೇಶಗಳು ಸಂಗೀತವನ್ನು ಮನರಂಜನೆ ಎಂದು ಪರಿಗಣಿಸುತ್ತವೆ. ಅಲ್ಲಿ ಅದನ್ನು ರೋಮಾಂಚನಕ್ಕಾಗಿ ನುಡಿಸಲಾಗುತ್ತದೆ. ಆದರೆ ಭಾರತದಲ್ಲಿ ಸಂಗೀತವು ಆತ್ಮವನ್ನು ಸಂತುಷ್ಟಿಗೊಳಿಸುವ ಸಾಧನ, ನಮ್ಮ ಮನಸ್ಸಿಗೆ ನೆಮ್ಮದಿ ನೀಡುವ ಕಲೆಯಾಗಿದೆ’ ಎಂದು ಭಾಗವತ್ ತಿಳಿಸಿದ್ದಾರೆ.