ಅ.18 ರಿಂದ ದೇಶೀಯ ವಿಮಾನಗಳು ಯಾವುದೇ ಸೀಟು ಸಾಮರ್ಥ್ಯದ ನಿರ್ಬಂಧವಿಲ್ಲದೆ ಕಾರ್ಯ ನಿರ್ವಹಿಸಬಹುದು: ಕೇಂದ್ರ

ವಿಮಾನಯಾನ ಸಂಸ್ಥೆಗಳ ಅಕ್ಟೋಬರ್ 18 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ದೇಶಿ ವಿಮಾನಗಳು ಕಾರ್ಯಾಚರಣೆ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಮಾನಯಾನ ಸಂಸ್ಥೆಗಳ ಅಕ್ಟೋಬರ್ 18 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ದೇಶಿ ವಿಮಾನಗಳು ಕಾರ್ಯಾಚರಣೆ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.

ನಾಗರಿಕ ವಿಮಾನಯಾನ ಸಚಿವಾಲಯ ದೇಶೀಯ ವಿಮಾನಗಳ ಶೇ. 100 ಸಾಮರ್ಥ್ಯಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದೆ.

ಸಚಿವಾಲಯವು ತನ್ನ ಆದೇಶದಲ್ಲಿ "ನಿಗದಿತ ದೇಶೀಯ ವಿಮಾನ ಕಾರ್ಯಾಚರಣೆಯನ್ನು ಅಕ್ಟೋಬರ್ 18, 2021 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ಪುನಃಸ್ಥಾಪಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದೆ.

ಸಚಿವಾಲಯದ ಆದೇಶದ ಪ್ರಕಾರ, ಸೆಪ್ಟೆಂಬರ್ 18 ರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಕೋವಿಡ್ ಪೂರ್ವ ದೇಶೀಯ ಸೇವೆಗಳಲ್ಲಿ ಶೇಕಡಾ 85 ರಷ್ಟು ಕಾರ್ಯನಿರ್ವಹಿಸುತ್ತಿವೆ. ಆಗಸ್ಟ್ 12 ರಿಂದ ವಿಮಾನಯಾನ ಸಂಸ್ಥೆಗಳು ಶೇ. 72.5, ಜುಲೈ 5 ಮತ್ತು ಆಗಸ್ಟ್ 12 ರ ನಡುವೆ ಶೇ. 65 ರಷ್ಟಿತ್ತು. ಜೂನ್ 1 ಮತ್ತು ಜುಲೈ 5 ರ ನಡುವೆ ಶೇ. 50 ರಷ್ಟು ದೇಶಿ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com