ಮೇಲಾಧಿಕಾರಿಗಳಿಂದ ಕಿರುಕುಳ: ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆಗೆ ಶರಣು

ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಬಿಎಂಟಿಸಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಬಿಎಂಟಿಸಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

ಬಿಎಂಟಿಸಿಯ 41ನೇ ಘಟಕದ ಸಿಬ್ಬಂದಿ ಜಟ್ಟಪ್ಪ ಪಟೇದ್ ಅವರು ತಮ್ಮ ಸ್ವಂತ ಊರಿಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಟ್ಟಪ್ಪ ಪಟೇದ್ ಅವರು ನಿಯಂತ್ರಣಾಧಿಕಾರಿಗಳ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ್ದು, ಬೇರೆ ಬೇರೆ ಡಿಪೋಗಳಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಾಯ್ಸ್ ರೆಕಾರ್ಡ್ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನನಗೆ ತುಂಬಾ ಹಿಂಸೆ ಮಾಡಿದ್ದಾರೆ. ಇವತ್ತು ನಿಮಗೆ ಕೈ‌ಮುಗಿದು ಹೋಗುತ್ತಿದ್ದೇನೆ. ನಿಯಂತ್ರಣಾಧಿಕಾರಿಗಳು ಹಾಗೂ 41ನೇ ಡಿಪೋ ಅಧಿಕಾರಿಗಳು ಬಹಳ‌ ತೊಂದರೆ ಕೊಟ್ಟಿದ್ದಾರೆ. ಲಂಚ ಕೊಡದಿದ್ದಕ್ಕೆ ಬೇರೆ ಡಿಪೋಗೆ ವರ್ಗಾವಣೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಡಿಪೋ 6 ರಿಂದ 15ಕ್ಕೆ ವರ್ಗಾವಣೆ, 21ರಿಂದ 41ಕ್ಕೆ ವರ್ಗಾವಣೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ವಾಯ್ಸ್ ರೆಕಾರ್ಡ್ ಮಾಡಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com