ನಕಲಿ ಐಡಿ ಇಟ್ಟುಕೊಂಡು ಭಾರತೀಯ ಪ್ರಜೆ ಎಂದು ಓಡಾಟ: ದೆಹಲಿಯಲ್ಲಿ ಪಾಕ್ ಮೂಲದ ಉಗ್ರನ ಬಂಧನ
ಪಾಕಿಸ್ತಾನ ಮೂಲದ ಶಂಕಿತ ಉಗ್ರನೊಬ್ಬನನ್ನು ಮಂಗಳವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ದೆಹಲಿ ವಿಶೇಷ ತನಿಖಾ ತಂಡವು ಬಂಧಿತ ಉಗ್ರನನ್ನುತೀವ್ರ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.
Published: 12th October 2021 10:30 AM | Last Updated: 12th October 2021 12:18 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಪಾಕಿಸ್ತಾನ ಮೂಲದ ಶಂಕಿತ ಉಗ್ರನೊಬ್ಬನನ್ನು ಮಂಗಳವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ದೆಹಲಿ ವಿಶೇಷ ತನಿಖಾ ತಂಡವು ಬಂಧಿತ ಉಗ್ರನನ್ನುತೀವ್ರ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ನರೋವಾಲ್ ನಿವಾಸಿ ಮೊಹಮ್ಮದ್ ಅಶ್ರಫ್ ಬಂಧತ ಉಗ್ರ ಎಂದು ಗುರುತಿಸಲಾಗಿದ್ದು, ಆತನಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಬಿಹಾರ ಮೂಲದ ಬೀದಿ ವ್ಯಾಪಾರಿಯನ್ನು ಹತ್ಯೆ ಮಾಡಿದ ಉಗ್ರ ಸೇರಿ ಶೋಪಿಯಾನ್ ನಲ್ಲಿ 3 ಟಿಆರ್ ಎಫ್ ಉಗ್ರರ ಹತ್ಯೆ: ಪೊಲೀಸರು
ನಕಲಿ ಗುರುತಿನ ಚೀಟಿ ಇಟ್ಟುಕೊಂಡಿದ್ದ ಈತ ಭಾರತೀಯ ಪ್ರಜೆ ಎಂದು ದೆಹಲಿಯಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ. ಇದೀಗ ಈತನ್ನು ದೆಹಲಿ ವಿಶೇಷ ತನಿಖಾ ತಂಡದ ಬಲೆಗೆ ಬಿದ್ದಿದ್ದಾರೆ.