ರಾಯ್​ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ; 6 ಸಿಆರ್'ಪಿಎಫ್ ಯೋಧರಿಗೆ ಗಾಯ

ಛತ್ತೀಸ್​ಗಡ್​​ನ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟವುಂಟಾಗಿ ಸಿಆರ್​ಪಿಎಫ್​​ನ 6 ಯೋಧರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಯ್ಪುರ: ಛತ್ತೀಸ್​ಗಡ್​​ನ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟವುಂಟಾಗಿ ಸಿಆರ್​ಪಿಎಫ್​​ನ 6 ಯೋಧರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. 

ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್​ಪಿಎಫ್​ ವಿಶೇಷ ರೈಲಿನಲ್ಲಿ, ಇಗ್ನಿಟರ್​ ಸೆಟ್​​ ಇರುವ ಪೆಟ್ಟಿಗೆಯೊಂದು ಕೆಳಗೆ ಬಿದ್ದ ನಂತರ ಈ ಸ್ಫೋಟವುಂಟಾಗಿದೆ ಎಂದು ರಾಯ್ಪುರ ಪೊಲೀಸ್​ ಹೇಳಿದ್ದಾರೆ. 

ಈ ರೈಲು ಪ್ಲಾಟ್​ಫಾರ್ಮ್​ ನಂಬರ್​ 2ರಲ್ಲಿ ನಿಂತಿತ್ತು, ಮುಂಜಾನೆ 6.30ರ ಹೊತ್ತಲ್ಲಿ ಈ ಇಗ್ನಿಟೆರ್​ ಸೆಟ್​​ಗಳಿರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಅದು ಕೆಳಗೆ ನೆಲದ ಮೇಲೆ ಬಿದ್ದಿದ್ದಾಗಿ ವರದಿಯಾಗಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಸ್ಫೋಟದ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com