ಕೋವಿಡ್-19 ಲಸಿಕೆ ಪಡೆದರೆ ಟಿವಿ ಸೆಟ್, ಮೊಬೈಲ್ ಫೋನ್ ಗೆಲ್ಲುವ ಅವಕಾಶ!
ಮಣಿಪುರದ ಇಪಾಲ್ ಪೂರ್ವ ಜಿಲ್ಲೆಯ ಜನರು ಕೋವಿಡ್-19 ಬೃಹತ್ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದರೆ ಟಿವಿ ಸೆಟ್, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ ಗೆಲ್ಲುವ ಅವಕಾಶವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Published: 17th October 2021 04:51 PM | Last Updated: 17th October 2021 04:54 PM | A+A A-

ಸಾಂದರ್ಭಿಕ ಚಿತ್ರ
ಇಂಪಾಲ್: ಮಣಿಪುರದ ಇಪಾಲ್ ಪೂರ್ವ ಜಿಲ್ಲೆಯ ಜನರು ಕೋವಿಡ್-19 ಬೃಹತ್ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದರೆ ಟಿವಿ ಸೆಟ್, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ ಗೆಲ್ಲುವ ಅವಕಾಶವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಲಸಿಕೆ ನೀಡುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಕ್ಟೋಬರ್ 24, ಅಕ್ಟೋಬರ್ 31 ಮತ್ತು ನವೆಂಬರ್ 7 ರಂದು ಜಿಲ್ಲೆಯ ಮೂರು ಕೇಂದ್ರಗಳಲ್ಲಿ 'ಲಸಿಕೆ ಪಡೆದು, ಬಹುಮಾನ ಗೆಲ್ಲಿರಿ' ಘೋಷಣೆಯೊಂದಿಗೆ ಮೆಗಾ ಲಸಿಕೆ ನೀಡಿಕೆ ಕಮ್ ಬಂಪರ್ ಡ್ರಾ ಕಾರ್ಯಕ್ರಮವನ್ನು ಆಯೋಜಿಸಲು ಇಂಪಾಲದ ಪೂರ್ವ ಜಿಲ್ಲಾಡಳಿತ ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಜಿಲ್ಲಾಧಿಕಾರಿ ಟಿ.ಹೆಚ್. ಕಿರಣ್ ಕುಮಾರ್, ಮೂರು ಕೇಂದ್ರಗಳಲ್ಲಿ ಲಸಿಕೆ ಪಡೆದವರು, ಬಂಪರ್ ಡ್ರಾದಲ್ಲಿ ಪಾಲ್ಗೊಂಡು ಬಹುಮಾನ ಗೆಲಲ್ಲು ಅವಕಾಶವಿದೆ ಎಂದು ಹೇಳಿದ್ದಾರೆ. ಮೊದಲ ಬಹುಮಾನವಾಗಿ ದೊಡ್ಡ ಪರದೆಯ ಟಿವಿ ಸೆಟ್, ಎರಡನೇ ಬಹುಮಾನವಾಗಿ ಮೊಬೈಲ್ ಫೋನ್ ಹಾಗೂ ಮೂರನೇ ಬಹುಮಾನವಾಗಿ ಬ್ಲಾಂಕೆಟ್ ಮತ್ತಿತರ ಸಮಾಧಾನಕಾರ ಬಹುಮಾನ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಮೊದಲ ಹಾಗೂ ಎರಡನೇ ಡೋಸ್ ಕೋವಿಡ್-19 ಲಸಿಕೆ ಪಡೆಯದ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಲಕ್ಕಿ ಡ್ರಾನಲ್ಲಿ ಪಾಲ್ಗೊಂಡು , ಬಹುಮಾನ ಗೆಲ್ಲಲು ಅರ್ಹರಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.