ಭಾರತದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಇಸ್ರೇಲಿ ಉದ್ಯಮಪತಿಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಕರೆ

ಮಾತುಕತೆ ವೇಳೆ ಭಾರತ ಸರ್ಕಾರದ ನೂತನ ಕೃಷಿ ಸುಧಾರಣಾ ಕಾನೂನಿನಿಂದ ಭವಿಷ್ಯದಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿದೆ ಎಂದ ಜೈಶಂಕರ್.
ಎಸ್ ಜೈಶಂಕರ್
ಎಸ್ ಜೈಶಂಕರ್

ಜೆರುಸಲೆಂ: ವ್ಯಾಪಾರ ಮಾತುಕತೆ ಸಂಬಂಧ ಇಸ್ರೇಲ್ ಗೆ ಭೇಟಿ ನೀಡಿರುವ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಭಾರತದ ಅತ್ಯಂತ ವಿಶ್ವಾಸಪಾತ್ರ ದೇಶ ಇಸ್ರೇಲ್ ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ ಉದ್ಯಮ ಸ್ನೇಹ ವಾತಾವರಣವಿದ್ದು ಅದನ್ನು ಇಸ್ರೇಲಿ ಉದ್ಯಮಪತಿಗಳು ಬಳಸಿಕೊಳ್ಳಬೇಕಾಗಿ ಅವರು ಕರೆ ನೀಡಿದ್ದಾರೆ. 

ಇದೇ ವೇಳೆ ಅವರು ನೀಡಿದ ಭಾಷಣದಲ್ಲಿ ಜೈಶಂಕರ್ ಅವರು ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ದೇಶದಲ್ಲಿ ತುಂಬಾ ಬದಲಾವಣೆಗಳಾಗಿವೆ, ಜನರು ಆ ಕುರಿತಾಗಿ ಸ್ವಲ್ಪ ಸ್ವಲ್ಪವೇ ತಿಳಿದುಕೊಂಡಿದ್ದಾರೆ ಎಂದರು.

ಇವೆಲ್ಲಾ ವಿಚಾರಗಳಿಂದ ದೇಶ ಪ್ರಗತಿಯತ್ತ ಮುಂದಡಿ ಇಟ್ಟಿದೆಯೆಂಬುದು ಯಾರಿಗೇ ಆದರೂ ಅರ್ಥವಾಗುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ. ಅವರು ಪ್ರಮುಖವಾಗಿ ಇಸ್ರೇಲಿನ ಭದ್ರತಾ ಕ್ಷೇತ್ರದ ಸಂಸ್ಥೆಗಳನ್ನು ಭಾರತದಲ್ಲಿ ಹೂಡಿಕೆ ನಡೆಸಲು ಆಹ್ವಾನಿಸಿದ್ದಾರೆ.

ಮಾತುಕತೆ ವೇಳೆ ಭಾರತ ಸರ್ಕಾರದ ನೂತನ ಕೃಷಿ ಸುಧಾರಣಾ ಕಾನೂನಿನಿಂದ ಭವಿಷ್ಯದಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com