ಡ್ರಗ್ಸ್ ಕೇಸ್: ಎನ್ ಸಿಬಿ ಕಚೇರಿಗೆ ಶಾರೂಖ್ ಖಾನ್ ಮ್ಯಾನೇಜರ್ ಭೇಟಿ

ಬಾಲಿವುಡ್ ನಟ ಶಾರೂಖ್ ಖಾನ್ ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಶನಿವಾರ ಬೆಳಗ್ಗೆ ಮುಂಬೈಯಲ್ಲಿನ ಎನ್ ಸಿಬಿ ಕಚೇರಿಗೆ ಭೇಟಿ ನೀಡಿದ್ದಾಗಿ ಮೂಲಗಳು ಹೇಳಿವೆ.
ಪೂಜಾ ದಾದ್ಲಾನಿ
ಪೂಜಾ ದಾದ್ಲಾನಿ

ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಶನಿವಾರ ಬೆಳಗ್ಗೆ ಮುಂಬೈಯಲ್ಲಿನ ಎನ್ ಸಿಬಿ ಕಚೇರಿಗೆ ಭೇಟಿ ನೀಡಿದ್ದಾಗಿ ಮೂಲಗಳು ಹೇಳಿವೆ.

ಇಂದು ಬೆಳಗ್ಗೆ ಸುಮಾರು 100 ಗಂಟೆ ಸುಮಾರಿಗೆ ಏನ್ ವೊಲಾಪ್ ಒಂದನ್ನು ಕೈಯಲ್ಲಿ ಹಿಡಿದುಕೊಂಡು ದಕ್ಷಿಣ ಮುಂಬೈಯ ಬಲ್ಲಾರ್ಡ್ ಎಸ್ಟೇಟ್ ನಲ್ಲಿರುವ ಡ್ರಗ್ ನಿಗ್ರಹ ಏಜೆನ್ಸಿಯ ಕಚೇರಿಗೆ ದಾದ್ಲಾನಿ ಆಗಮಿಸಿದ್ದರು ಎಂದು ಅವುಗಳು ತಿಳಿಸಿವೆ.

ಸುಮಾರು ಒಂದು ಗಂಟೆಯ ನಂತರ ಕಚೇರಿಯಿಂದ ಆಕೆ ಹೊರಗೆ ಬರುವಾಗ ಆಕೆಯ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಸಿಬ್ಬಂದಿ ಪ್ರಯತ್ನಿಸಿದರಾದರೂ, ಆಕೆ ಅವರೊಂದಿಗೆ ಮಾತನಾಡದೆ ಅಲ್ಲಿಂದ ತೆರಳಿದರು.

ಮುಂಬೈ ಕರಾವಳಿಯಲ್ಲಿ ಕ್ರೂಸ್ ಶಿಫ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ ಮೂರರಂದು ಎನ್ ಸಿಬಿ ಬಂಧಿಸಿತ್ತು. ಗುರುವಾರ  ಬಂದ್ರಾದಲ್ಲಿರುವ ನಟ ಶಾರೂಖ್ ಖಾನ್ ಮನೆಗೆ ಭೇಟಿ ನೀಡಿದ್ದ ಎನ್ ಸಿಬಿ ತಂಡ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಕೋರಿತು. 

ಶುಕ್ರವಾರ ಸಂಜೆ ಶಾರೂಖ್ ಖಾನ್ ಅಂಗರಕ್ಷಕ ಎನ್ ಸಿಬಿ ಕಚೇರಿಗೆ ಭೇಟಿ ನೀಡಿ, ಮುಚ್ಚಿದ ಲಕೋಟೆಯಲ್ಲಿ ಕೆಲ ದಾಖಲಾತಿಗಳನ್ನು ಎನ್ ಸಿಬಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com