ಆರ್ಯನ್ ಖಾನ್ ಪ್ರಕರಣ: ಲಂಚ ಆರೋಪದಿಂದ ಕಾನೂನು ರಕ್ಷಣೆ ಪಡೆಯಲು ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ಮುಂದು

ವಾಂಖಡೆ ಪರವಾಗಿ ಅವರ ಮಧ್ಯವರ್ತಿಯೋರ್ವ ಶಾರುಖ್ ಮ್ಯಾನೇಜರ್ ಬಳಿ 25 ಕೋಟಿ ರೂ. ಲಂಚ ಕೊಟ್ಟರೆ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದ್ದಾಗಿ ಆರೋಪ ಕೇಳಿಬಂದಿತ್ತು.
ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ
ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ

ಮುಂಬೈ: ಬಾಲಿವುಡ್ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣ ವಿಚಾರಣೆ ಉಸ್ತುವಾರಿ ಹೊತ್ತಿದ್ದ ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ವಿರುದ್ಧ 25 ಕೋಟಿ ಹಣದ ಆಮಿಷ ಆರೋಪ ದಾಖಲಾಗಿತ್ತು. ಅದರ ಬೆನ್ನಲ್ಲೇ ಸಮೀರ್ ವಾಂಖಡೆ ಅವರು ತಮ್ಮ ವಿರುದ್ಧ ಆರೋಪದ ವಿರುದ್ಧ ಕಾನೂನು ರಕ್ಷಣೆ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ವಾಂಖಡೆ ಅವರು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗರಾಳೆ ಅವರಿಗೆ ಪತ್ರ ಬರೆದಿದ್ದು, ತಮ್ಮ ವಿರುದ್ಧ ಲಂಚದ ಆರೋಪ ನಿರಾಧಾರವಾಗಿದ್ದು, ಅದರ ವಿರುದ್ಧ ತಮಗೆ ಕಾನೂನು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. 

ವಾಂಖಡೆ ಅವರ ಮಧ್ಯವರ್ತಿಯೋರ್ವ ಶಾರುಖ್ ಬಳಿ 25 ಕೋಟಿ ರೂ. ಲಂಚ ಕೊಟ್ಟರೆ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದ್ದಾಗಿ ಪ್ರಕರಣದ ಮೊದಲನೇ ಆರೋಪಿ ಪ್ರಭಾಕರ್ ಸಯಿಲ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com