ದೆಹಲಿ ಕಾರಾಗೃಹದ ಕೈದಿಗಳಿಗೆ ಸುಮಾರು 17 ಸಾವಿರ ಡೋಸ್ ಕೋವಿಡ್ ಲಸಿಕೆ ನೀಡಿಕೆ

ರಾಷ್ಟ್ರ ರಾಜಧಾನಿ ನವದೆಹಲಿಯ ಮೂರು ಕಾರಾಗೃಹದ ಕೈದಿಗಳಿಗೆ ಈವರೆಗೂ ಸುಮಾರು 17,362 ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ದೆಹಲಿ ಕಾರಾಗೃಹ ಇಲಾಖೆ ಭಾನುವಾರ ಹೇಳಿದ್ದಾರೆ.
ದೆಹಲಿಯ ಕಾರಾಗೃಹವೊಂದರ ಚಿತ್ರ
ದೆಹಲಿಯ ಕಾರಾಗೃಹವೊಂದರ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಮೂರು ಕಾರಾಗೃಹದ ಕೈದಿಗಳಿಗೆ ಈವರೆಗೂ ಸುಮಾರು 17,362 ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ದೆಹಲಿ ಕಾರಾಗೃಹ ಇಲಾಖೆ ಭಾನುವಾರ ಹೇಳಿದ್ದಾರೆ.

 ತಿಹಾರ್ ಜೈಲಿನಲ್ಲಿ 11,844 ಕೈದಿಗಳಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 9, 028 ಕೈದಿಗಳು ಮೊದಲ ಡೋಸ್ ಪಡೆದಿದ್ದರೆ, 2, 816 ಕೈದಿಗಳು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ . ರೋಹಿಣಿ ಜೈಲಿನಲ್ಲಿ 1, 073 ಕೈದಿಗಳ ಪೈಕಿ 885 ಕೈದಿಗಳು ಮೊದಲ ಡೋಸ್ ಪಡೆದಿದ್ದರೆ, 188 ಕೈದಿಗಳು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಮಾಂಡೊಲಿ ಜೈಲಿನಲ್ಲಿ 2,794 ಕೈದಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, 1,651 ಕೈದಿಗಳು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಕಾರಾಗೃಹ ಇಲಾಖೆ  45 ವರ್ಷದ ಕೈದಿಗಳಿಗೆ ಮಾರ್ಚ್ 18ರಿಂದ ಹಾಗೂ 18 ರಿಂದ 44 ವರ್ಷದೊಳಗಿನವರಿಗೆ ಮೇ 18 ರಿಂದ  ಕೋವಿಡ್ ಲಸಿಕಾ ಅಭಿಯಾನವನ್ನು ಆರಂಭಿಸಿತ್ತು. ಈ ವರ್ಷದ ಮಾರ್ಚ್ ತಿಂಗಳಿನಿಂದ ಈವರೆಗೂ ಈ ಮೂರು ಜೈಲುಗಳಲ್ಲಿ ಸುಮಾರು 383 ಕೋವಿಡ್-19 ಕೇಸ್ ಗಳು ಪತ್ತೆಯಾಗಿದ್ದು, 8 ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com