ಎಲ್ಗಾರ್ ಪರಿಷದ್ ಆರೋಪಿ ವರವರ ರಾವ್ ಜಾಮೀನು ಅವಧಿ ವಿಸ್ತರಿಸಿದ ಬಾಂಬೆ ಹೈಕೋರ್ಟ್

ತಲೋಜಾ ಜೈಲಿನಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ ರಾವ್ ಅವರಿಗೆ ಫೆಬ್ರವರಿ 22ರಂದು ಜಾಮೀನು ದೊರೆತಿತ್ತು. ಅದರಂತೆ ಸೆಪ್ಟೆಂಬರ್ 5ರಂದು ಅವರ ಜಾಮೀನು ಅವಧಿ ಕೊನೆಗೊಳ್ಳಲಿತ್ತು. 
ಸಾಹಿತಿ ವರವರ ರಾವ್
ಸಾಹಿತಿ ವರವರ ರಾವ್

ಮುಂಬೈ: ಎಲ್ಗಾರ್ ಪರಿಷದ್ ಗಲಭೆ ಪ್ರಕರದಡಿ ಮಾವೋವಾದಿಗಳೊಂದಿಗೆ ನಂಟು ಹೊಂದಿದ ಆರೋಪದಡಿ ಬಂಧನಕ್ಕೊಳಗಾಗಿ ಮಧ್ಯಂತರ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ ತೆಲುಗು ಕವಿ, ಸಾಹಿತಿ ವರವರ ರಾವ್ ಅವರ್ ಜಾಮೀನು ಅವಧಿಯನ್ನು ಬಾಂಬೆ ಹೈಕೋರ್ಟ್ ವಿಸ್ತರಿಸಿದೆ.

ತಲೋಜಾ ಜೈಲಿನಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ ರಾವ್ ಅವರಿಗೆ ಫೆಬ್ರವರಿ 22ರಂದು ಜಾಮೀನು ದೊರೆತಿತ್ತು. ಅದರಂತೆ ಸೆಪ್ಟೆಂಬರ್ 5ರಂದು ಅವರ ಜಾಮೀನು ಅವಧಿ ಕೊನೆಗೊಳ್ಳಲಿತ್ತು. 

ಇದೀಗ ಜಾಮೀನು ಅವಧಿಯನ್ನು ನವೆಂಬರ್ 18ರ ತನಕ ವಿಸ್ತರಿಸಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ. 82 ವರ್ಷದ ರಾವ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಆಧಾರದ ಮೇರೆಗೆ ಜಾಮೀನು ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com