ಅಂದಿನ ಬಾಂಬ್ ಸ್ಫೋಟದ ದೃಶ್ಯ
ಅಂದಿನ ಬಾಂಬ್ ಸ್ಫೋಟದ ದೃಶ್ಯ

ಪಾಟ್ನಾದ ಗಾಂಧಿ ಮೈದಾನದಲ್ಲಿ 2013ರ ಸರಣಿ ಬಾಂಬ್ ಸ್ಫೋಟ ಪ್ರಕರಣ: 9 ಮಂದಿ ಅಪರಾಧಿಗಳು, ಓರ್ವ ಖುಲಾಸೆ

2013ರ ಗಾಂಧಿ ಮೈದಾನ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಮಂದಿ ಆರೋಪಿಗಳಲ್ಲಿ 9 ಮಂದಿಯನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿದ್ದು ಓರ್ವನನ್ನು ಖುಲಾಸೆಗೊಳಿಸಲಾಗಿದೆ. 

ಪಾಟ್ನಾ: 2013ರ ಗಾಂಧಿ ಮೈದಾನ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಮಂದಿ ಆರೋಪಿಗಳಲ್ಲಿ 9 ಮಂದಿಯನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿದ್ದು ಓರ್ವನನ್ನು ಖುಲಾಸೆಗೊಳಿಸಲಾಗಿದೆ. 

ಸಾಕ್ಷ್ಯಾಧಾರಗಳ ಕೊರತೆಯಿಂದ ಓರ್ವನನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಹೇಳಿದೆ. 

ಅಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ, ಇಂದಿನ ಪ್ರಧಾನಿ ನರೇಂದ್ರ ಮೋದಿಯವರ 'ಹುಂಕಾರ್' ರ್ಯಾಲಿ ಸಂದರ್ಭದಲ್ಲಿ ರ್ಯಾಲಿ ನಡೆಯುತ್ತಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿತ್ತು. 

ಅಕ್ಟೋಬರ್ 27, 2013 ರಂದು ಬಿಹಾರದ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಸರಣಿ ಸ್ಫೋಟಗಳಲ್ಲಿ ಆರು ಜನರು ಮೃತಪಟ್ಟು 90 ಕ್ಕೂ ಹೆಚ್ಚು ಜನರು ಗಾಯಗೊಂಡರು. ಅದಾಗ್ಯೂ, ಮೋದಿ ಭಾಷಣ ಮಾಡುವುದರೊಂದಿಗೆ ರ್ಯಾಲಿ ಮುಂದುವರೆಯಿತು. ಮೈದಾನದಲ್ಲಿ ಕಾಲ್ತುಳಿತವನ್ನು ಪೊಲೀಸರು ತಪ್ಪಿಸಿದ್ದರು. ಮೋದಿಯವರ ಮಾತುಗಳು ನೆರೆದಿದ್ದ ಜನರನ್ನು ಶಾಂತಗೊಳಿಸಿತ್ತು.

ನಂತರ, ಎನ್‌ಐಎ ನವೆಂಬರ್ 6, 2013 ರಂದು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತು. 11 ಆರೋಪಿಗಳ ವಿರುದ್ಧ ಆಗಸ್ಟ್ 21, 2014 ರಂದು ಚಾರ್ಜ್ ಶೀಟ್ ಸಲ್ಲಿಸಿತು. ಈ ಹಿಂದೆ ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ದೆಹಲಿಗಳಲ್ಲಿ ಮೋದಿ ರ್ಯಾಲಿಗಳಲ್ಲಿ ಅವರ ಬಳಿ ಹೋಗಲು ವಿಫಲವಾದದ್ದರಿಂದ ಪಾಟ್ನಾದಲ್ಲಿ ಸ್ಫೋಟ ನಡೆಸಲು ಆಪರಾಧಿಗಳು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂತು. 

9 ಮಂದಿ ಇಂಡಿಯನ್ ಮುಜಾಹಿದೀನ್ (IM) ಶಂಕಿತರು ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಅನ್ನು ಪ್ರಕರಣದಲ್ಲಿ ಅಪರಾಧಿಗಳೆಂದು ತೀರ್ಪು ನೀಡಲಾಗಿದೆ. ಅಪರಾಧಿಗಳನ್ನು ನುಮಾನ್ ಅನ್ಸಾರಿ, ಹೈದರ್ ಅಲಿ ಅಲಿಯಾಸ್ "ಬ್ಲ್ಯಾಕ್ ಬ್ಯೂಟಿ", ಮೊಹಮ್ಮದ್ ಮುಜಿಬುಲ್ಲಾ ಅನ್ಸಾರಿ, ಉಮರ್ ಸಿದ್ದಿಕಿ, ಅಜರುದ್ದೀನ್ ಖುರೇಷಿ, ಅಹ್ಮದ್ ಹುಸೇನ್, ಫಕ್ರುದ್ದೀನ್, ಮೊಹಮ್ಮದ್ ಇಫ್ತೆಕರ್ ಆಲಂ ಮತ್ತು ಮತ್ತೊಬ್ಬ ಅಪ್ರಾಪ್ತ ಎಂದು ಗುರುತಿಸಲಾಗಿದ್ದು, ಆತನ ಗುರುತನ್ನು ಗೌಪ್ಯವಾಗಿಡಲಾಗಿದೆ. 

ಒಬ್ಬ ಆರೋಪಿ ತಾರಿಖ್ ಅನ್ಸಾರಿ ಪಾಟ್ನಾದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್ ಇಡಲು ಪ್ರಯತ್ನಿಸುತ್ತಿದ್ದಾಗ ಮೃತಪಟ್ಟಿದ್ದರು. ಅಪರಾಧಿಗಳು ಸದ್ಯ ಪಾಟ್ನಾ ಜೈಲಿನಲ್ಲಿ ಇರಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com