ಭಾರತದ ಗಗನ್ ಯಾನ್ ಮಿಷನ್ ನ್ನು ಬೆಂಬಲಿಸುತ್ತೇವೆ: ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಉಪಮುಖ್ಯಸ್ಥ
ಭಾರತದ ಗಗನ್ ಯಾನ್ ಮಿಷನ್ ನ್ನು ಬೆಂಬಲಿಸಲಿಸುವುದಾಗಿ ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಯ ಉಪಮುಖ್ಯಸ್ಥ ಆಂಟನಿ ಮರ್ಫೆಟ್ ಹೇಳಿದ್ದಾರೆ.
Published: 13th September 2021 11:02 PM | Last Updated: 13th September 2021 11:02 PM | A+A A-

ಆಂಟನಿ ಮರ್ಫೆಟ್
ನವದೆಹಲಿ: ಭಾರತದ ಗಗನ್ ಯಾನ್ ಮಿಷನ್ ನ್ನು ಬೆಂಬಲಿಸಲಿಸುವುದಾಗಿ ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಯ ಉಪಮುಖ್ಯಸ್ಥ ಆಂಟನಿ ಮರ್ಫೆಟ್ ಹೇಳಿದ್ದಾರೆ.
ಸಿಐಐ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಉಭಯ ರಾಷ್ಟ್ರಗಳ ನಡುವಿನ ಬಾಹ್ಯಾಕಾಶ ಸಹಕಾರ ಏರುಗತಿಯಲ್ಲಿದ್ದು ಇತ್ತೀಚೆಗೆ ಭಾರತ- ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಗಳು ಎಂಒಯುಗೆ ಸಹಿ ಹಾಕಿವೆ ಎಂದು ಹೇಳಿದ್ದಾರೆ.
ಟ್ರ್ಯಾಕಿಂಗ್ ಮಾಡುವ ಮೂಲಕ ಕೊಕೊಸ್ ಕೀಲಿಂಗ್ ದ್ವೀಪಗಳಲ್ಲಿ ಆಸ್ಟ್ರೇಲಿಯಾ ಭಾರತದ ಮಹತ್ವಾಕಾಂಕ್ಷಿ ಯೋಜನೆ ಗಗನ್ ಯಾನ್ ಗೆ ಸಹಕಾರ ನೀಡಲಿದೆ ಎಂದು ಆಂಟನಿ ತಿಳಿಸಿದ್ದಾರೆ.
ಗಗನ್ ಯಾನ್ ಮಿಷನ್ ಗಾಗಿ ಕೊಕೊಸ್ ಕೀಲಿಂಗ್ ದ್ವೀಪಗಳಲ್ಲಿ ಭಾರತ ಗ್ರೌಂಡ್ ಸ್ಟೇಷನ್ ನ್ನು ಹೊಂದಲು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದಾಗಿ ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದರು.
ಗ್ರೌಂಡ್ ಸ್ಟೇಷನ್ ಇಲ್ಲದೇ ಇದ್ದಲ್ಲಿ ಕಕ್ಷೆಯಲ್ಲಿರುವ ಉಪಗ್ರಹಗಳು ನಿಖರ ಮಾಹಿತಿಗಳನ್ನು ತಲುಪಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಗ್ರೌಂಡ್ ಸ್ಟೇಷನ್ ಮಹತ್ವ ಪಡೆದುಕೊಂಡಿದೆ.