ಕೋವಿಡ್ ಸಾಂಕ್ರಾಮಿಕ: 4ನೇ ಸ್ಥಾನಕ್ಕೆ ಇಳಿದ ಕರ್ನಾಟಕ, ಅಗ್ರಸ್ಥಾನದಲ್ಲೇ ಉಳಿದ ಕೇರಳ

ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದ ಕರ್ನಾಟಕದಲ್ಲಿ ಚೇತೋಹಾರಿ ಬೆಳವಣಿಗೆ ಕಂಡು ಬಂದಿದ್ದು, ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 4ನೇ ಸ್ಥಾನಕ್ಕೆ ಇಳಿದಿದೆ.
ಕೋವಿಡ್ ಲಸಿಕಾ ಕಾರ್ಯಕ್ರಮ
ಕೋವಿಡ್ ಲಸಿಕಾ ಕಾರ್ಯಕ್ರಮ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದ ಕರ್ನಾಟಕದಲ್ಲಿ ಚೇತೋಹಾರಿ ಬೆಳವಣಿಗೆ ಕಂಡು ಬಂದಿದ್ದು, ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 4ನೇ ಸ್ಥಾನಕ್ಕೆ ಇಳಿದಿದೆ.

4ನೇ ಸ್ಥಾನದಲ್ಲಿದ್ದ ತಮಿಳುನಾಡು ಇದೀಗ ಮೂರನೇ ಸ್ಥಾನಕ್ಕೇರಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಹೊಸ ಸೋಂಕು ಪ್ರಕರಣಗಳು ಕಡಿಮೆಯಾಗಿರುತ್ತಿರುವುದರಿಂದ 4ನೇ ಸ್ಥಾನಕ್ಕೆ ಇಳಿದಿದೆ ಎಂದು ಹೇಳಲಾಗಿದೆ. 

ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ 1,99,428 ಸಕ್ರಿಯ ಪ್ರಕರಣಗಳಿವೆ. 2ನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 53,220 ಸಕ್ರಿಯ ಪ್ರಕರಣಗಳಿವೆ. 16,549 ಸಕ್ರಿಯ ಪ್ರಕರಣಗನ್ನು ಹೊಂದಿರುವ ತಮಿಳುನಾಡು ಮೂರು ಮತ್ತು 15,782 ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಕರ್ನಾಟಕ 4ನೇ ಸ್ಥಾನದಲ್ಲಿವೆ.

ಇನ್ನು 14,412ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಆಂಧ್ರಪ್ರದೇಶ 5ನೇ ಸ್ಥಾನ ಮತ್ತು 13,525 ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮಿಜೋರಂ 6ನೇ ಸ್ಥಾನದಲ್ಲಿವೆ.  ಕೋವಿಡ್ 2ನೇ ಅಲೆ ವೇಳೆ ಅಗ್ರಸ್ಥಾನದಲ್ಲಿದ್ದ ದೆಹಲಿ ಬರೊಬ್ಬರಿ 21ನೇ ಸ್ಥಾನಕ್ಕೆ ಕುಸಿದಿದ್ದು, ಅಲ್ಲಿ ಕೇವಲ 400 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದ್ದು ಇಲ್ಲಿ ಕೇವಲ 4 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com