ಹೈದರಾಬಾದ್: 6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆ
6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಇಂದು ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.
Published: 16th September 2021 12:04 PM | Last Updated: 16th September 2021 12:22 PM | A+A A-

ಸೈದಾಪೇಟ್ ಅತ್ಯಾಚಾರ ಪ್ರಕರಣದ ಆರೋಪಿ ಪಲ್ಲಂಕೊಂಡ ರಾಜು
ಹೈದರಾಬಾದ್: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಇಂದು ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.
#AttentionPlease : The accused of "Child Sexual Molestation and murder @ Singareni Colony, found dead on the railway track, in the limits of #StationGhanpurPoliceStation.
— DGP TELANGANA POLICE (@TelanganaDGP) September 16, 2021
Declared after the verification of identification marks on deceased body. pic.twitter.com/qCPLG9dCCE
ಹೌದು.. ಇಡೀ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಲೆನೋವಾಗಿದ್ದ ಆರೋಪಿ ಪತ್ತೆ ಕಾರ್ಯದಲ್ಲಿ ಕೊನೆಗೂ ಪೊಲೀಸರು ವಿಫಲರಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಲ್ಲಂಕೊಂಡ ರಾಜು ಎಂಬಾತ ಶವವಾಗಿ ಪತ್ತೆಯಾಗಿದ್ದಾನೆ.
Telangana | Accused in case of rape & murder of a 6-year-old girl, was found dead on the railway track in the Ghanpur area
— ANI (@ANI) September 16, 2021
"Declared after the verification of identification marks on the deceased body," tweets DGP, Telangana Police
ಸೈದಾಬಾದ್ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಹೊತ್ತಿದ್ದ ಆರೋಪಿ ಪಲ್ಲಂಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಉನ್ನತ ಮೂಲಗಳು ಮಾಹಿತಿ ನೀಡಿದ್ದು, ರೈಲಿಗೆ ತಲೆಕೊಟ್ಟು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಆತನ ಕೈ ಮೇಲಿನ ಹಚ್ಚೆಯ ಆಧಾರದ ಮೇಲೆ ರಾಜುವನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹೈದರಾಬಾದ್ ಅಪ್ರಾಪ್ತೆ ಮೇಲೆ ಅತ್ಯಾಚಾರ: '10 ಲಕ್ಷ ಬಹುಮಾನ' ಘೋಷಿಸಿದ ಪೊಲೀಸರು, 'ಎನ್ಕೌಂಟರ್' ಪ್ರತಿಜ್ಞೆ ಮಾಡಿದ ಸಚಿವ
ಇದೇ ಸೆಪ್ಟೆಂಬರ್ 9ರಂದು ಹೈದರಾಬಾದ್ನ ಸೈದಾಬಾದ್ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಭೀಕರೃವಾಗಿ ಹತ್ಯೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಬಾಲಕಿಯನ್ನು ಕೊಲೆಗೈದು ಆರೋಪಿ ಕಾಣೆಯಾಗಿದ್ದ. ಪೊಲೀಸರು ಆತನಿಗಾಗಿ ಸಾಕಷ್ಟು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು, ಆತನ ಪತ್ತೆ ಸಾಧ್ಯವಾಗಿರಲಿಲ್ಲ. ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು.
ಇದನ್ನೂ ಓದಿ: ನೋಯ್ಡಾ: ಅನೈತಿಕ ಸಂಬಂಧಕ್ಕಾಗಿ ಪತ್ನಿಯನ್ನು ಕೊಂದ ಬಾಂಗ್ಲಾದೇಶಿ ವ್ಯಕ್ತಿ ಬಂಧನ!
ಇದೇ ವಿಚಾರವಾಗಿ ಮಾತನಾಡಿದ್ದ ತೆಲಂಗಾಣ ಗೃಹ ಸಚಿವರು ಆರೋಪಿಯನ್ನು ಎನ್ಕೌಂಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಉಪ್ಪಲ್ ಪ್ರದೇಶದಲ್ಲಿ ನಿನ್ನೆ ಸುತ್ತಾಡಿದ್ದನು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದರೆ ಪೊಲೀಸರ ಕೈವಶವಾಗುವಷ್ಟರಲ್ಲಿಯೇ ಆತ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.