ಮುಂಬೈ: ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ, 14 ಮಂದಿಗೆ ಗಾಯ

ನಿರ್ಮಾಣ ಹಂತದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ 14 ಮಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಕುಸಿದು ಬಿದ್ದಿರುವ ಫ್ಲೈ ಓವರ್ ನ ಒಂದು ಭಾಗ
ಕುಸಿದು ಬಿದ್ದಿರುವ ಫ್ಲೈ ಓವರ್ ನ ಒಂದು ಭಾಗ

ಮುಂಬೈ: ನಿರ್ಮಾಣ ಹಂತದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ 14 ಮಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಮುಖ್ಯ ರಸ್ತೆ ಮತ್ತು ಸಾಂತಾ ಕ್ರೂಜ್-ಚೆಂಬೂರ್ ಲಿಂಕ್ ರಸ್ತೆ ಸಂಪರ್ಕಿಸುವ 
ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನ ಒಂದು ಭಾಗ ಮುಂಜಾನೆ 4-30ರ ಸುಮಾರಿನಲ್ಲಿ ಕುಸಿದು ಬಿದಿದ್ದು, 14 ಜನರಿಗೆ ಗಾಯಗಳಾಗಿವೆ. 

14 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ, ಯಾರೂ ಕೂಡಾ ನಾಪತ್ತೆಯಾಗಿಲ್ಲ. ಗಾಯಗೊಂಡಿರುವ ಎಲ್ಲಾರ ಆರೋಗ್ಯ ಸ್ಥಿರವಾಗಿದೆ ಎಂದು ವಲಯ 8ರ ಪೊಲೀಸ್ ಉಪ ಆಯುಕ್ತ ಮಂಜುನಾಥ ಸಿಂಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com