ಅಸ್ಸಾಂ: ಮಗನ ಆನ್‌ಲೈನ್ ಗೇಮ್ ಚಟಕ್ಕೆ 19 ಲಕ್ಷ ರೂ. ತೆತ್ತ ಪೋಷಕರು!

2 ವರ್ಷದ ಅಸ್ಸಾಂ ಹುಡುಗ ಆನ್‌ಲೈನ್ ಗೇಮಿಂಗ್‌ ವ್ಯಸನಿಯಾಗಿದ್ದು, 7ನೇ ತರಗತಿಯ ಈ ವಿದ್ಯಾರ್ಥಿ ತನ್ನ ಆನ್ ಲೈನ್ ಆಟಕ್ಕೆ ತಂದೆ ಕಷ್ಟಪಟ್ಟು ಸಂಪಾದಿಸಿದ್ದ 19 ಲಕ್ಷ ರೂ.ಗಳನ್ನು ವ್ಯರ್ಥ ಮಾಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹಟಿ: 12 ವರ್ಷದ ಅಸ್ಸಾಂ ಹುಡುಗ ಆನ್‌ಲೈನ್ ಗೇಮಿಂಗ್‌ ವ್ಯಸನಿಯಾಗಿದ್ದು, 7ನೇ ತರಗತಿಯ ಈ ವಿದ್ಯಾರ್ಥಿ ತನ್ನ ಆನ್ ಲೈನ್ ಆಟಕ್ಕೆ ತಂದೆ ಕಷ್ಟಪಟ್ಟು ಸಂಪಾದಿಸಿದ್ದ 19 ಲಕ್ಷ ರೂ.ಗಳನ್ನು ವ್ಯರ್ಥ ಮಾಡಿದ್ದಾನೆ.

ಮೊದಲು, ಆಟವಾಡಲು ವರ್ಚುವಲ್ ಗನ್ ಮತ್ತು ಕಾರುಗಳನ್ನು ಖರೀದಿಸಿದ್ದ ಈ ಬಾಲಕ, ನಂತರ ಗೇಮಿಂಗ್ ಪ್ಲಾಟ್‌ಫಾರ್ಮ್ ನಲ್ಲಿ 20 ವರ್ಷದ ಯುವಕನ ಸ್ನೇಹ ಮಾಡಿದ್ದಾನೆ. 

ಅಸ್ಸಾಂನಲ್ಲಿ ಈ ಘಟನೆ ನಡೆದ್ದಿದು, ಅಪ್ರಾಪ್ತ ಬಾಲಕನ ತಂದೆ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಬಾಲಕ ತನ್ನ ತಾಯಿಯ ಮೊಬೈಲ್ ಫೋನ್ ಅನ್ನು ತನ್ನ ಆನ್‌ಲೈನ್ ತರಗತಿಗಳಿಗೆ ಬಳಸುತ್ತಿತ್ತು. ಆದರೆ ಆತ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಅಥವಾ ಬಿಜಿಎಂಐ, ಆನ್‌ಲೈನ್ ಗೇಮ್ ಆಡಲು ಸಾಕಷ್ಟು ಸಮಯ ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ಅವರು ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಒಬ್ಬ ನಿಪುರಾಜ್ ಗೊಗೊಯ್(20) ಮತ್ತು 16 ವರ್ಷದ ಇನ್ನಿಬ್ಬರನ್ನು ಪರಿಚಯ ಮಾಡಿಕೊಂಡಿದ್ದಾನೆ. ಗೊಗೊಯ್ ಹುಡುಗನನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಾಲಕನ ತಾಯಿಯ ವಾಟ್ಸಾಪ್ ಮತ್ತು ಯುಪಿಐ ಸಂಖ್ಯೆಗಳನ್ನು ಸಂಗ್ರಹಿಸಿ ಅವರ ಬ್ಯಾಂಕ್ ಖಾತೆಯಿಂದ ಹಣ ಪಡೆದಿದ್ದಾರೆ ”ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಇನ್ಸ್‌ಪೆಕ್ಟರ್ ಲೋಕನಾಥ್ ಬಸುಮಾಟರಿ ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಆರಂಭದಲ್ಲಿ, ಆರೋಪಿಯು ಮಗುವಿಗೆ ವಿಶ್ವಾಸ ಗೆಲ್ಲಲು ವರ್ಚುವಲ್ ಗನ್ ಮತ್ತು ಇತರ ಪರಿಕರಗಳನ್ನು ಖರೀದಿಸಲು ಸಹಾಯ ಮಾಡಿದ್ದಾನೆ. ನಂತರ, ಅಪ್ರಾಪ್ತ ಬಾಲಕ ಆರೋಪಿಗಳ ಸಹಾಯದಿಂದ ಐಫೋನ್ ಸೇರಿದಂತೆ ಎರಡು ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದಾನೆ. 

ಮಗ ಎರಡು ಬೆಲೆ ಬಾಳುವ ಫೋನ್‌ಗಳನ್ನು ಖರೀದಿಸಿದ್ದನ್ನು ಗಮನಿಸಿ ಪೋಷಕರು ಅನುಮಾನಗೊಂಡಿದ್ದಾರೆ. ಆದರೆ ಅಷ್ಟರಲ್ಲೇ ಆರೋಪಿಗಳು ಮಹಿಳೆಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಸುಮಾರು 19 ಲಕ್ಷ ರೂ.ಗಳ ಲಪಟಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com