The New Indian Express
ನವದೆಹಲಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಅಲ್ಲಿನ ಹೈಕೋರ್ಟ್ ಆದೇಶ ನೀಡಿದೆ. ಭೂಪಾಲದಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಊವಂತೆ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: ಭೋಪಾಲ್ ಅನಿಲ ದುರಂತದ ಕುರಿತು ಎಚ್ಚರಿಸಿದ್ದ ಪತ್ರಕರ್ತ ಕೇಶ್ವಾನಿ ನಿಧನ
ಭೋಪಾಲ್ ಅನಿಲ ದುರಂತ ಸಂತ್ರಸ್ತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಹಲವು ಸಂಘಟನೆಗಳು ಹೈಕೋರ್ಟ್ ನಲ್ಲಿ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು. ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿ, ತಜ್ನರ ಸಮಿತಿ ವರದಿ ಆಧರಿಸಿ ಈ ತೀರ್ಪನ್ನು ನೀಡಿದೆ.
ಇದನ್ನೂ ಓದಿ: ಭೋಪಾಲ್ ಶವಾಗಾರದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಕೊರೋನಾ ಮೃತರ ಚಿತಾಭಸ್ಮ ಬಳಕೆ
ಯಾವುದೇ ಬಗೆಯ ಕ್ಯಾನ್ಸರ್ ಕಾಯಿಲೆಗಳಿಗೂ ಈ ಆದೇಶ ಅನ್ವಯವಾಗಲಿದೆ. ಅರ್ಜಿ ವಿಚಾರಣೆಯ ಮುಂದಿನ ದಿನಾಂಕ ಅಕ್ಟೋಬರ್ 8ರಂದು ನಡೆಯಲಿದೆ.