ಪ್ರತಿಭಟನೆ ಹಾದಿ ಬಿಟ್ಟು ರೈತರು ಮಾತುಕತೆಗೆ ಬರಬೇಕು, ರೈತರ ಪ್ರತಿಭಟನೆ ರಾಜಕೀಯ ವಿಚಾರವಾಗಬಾರದು: ಕೇಂದ್ರ ಸರ್ಕಾರ
ರೈತರು ಪ್ರತಿಭಟನಾ ಹಾದಿಯನ್ನು ಬಿಟ್ಟು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಹಾದಿಗೆ ಬರಬೇಕೆಂದು ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಭಾನುವಾರ ಹೇಳಿದ್ದಾರೆ.
Published: 27th September 2021 07:24 AM | Last Updated: 27th September 2021 07:24 AM | A+A A-

ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಗ್ವಾಲಿಯರ್: ರೈತರು ಪ್ರತಿಭಟನಾ ಹಾದಿಯನ್ನು ಬಿಟ್ಟು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಹಾದಿಗೆ ಬರಬೇಕೆಂದು ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಭಾನುವಾರ ಹೇಳಿದ್ದಾರೆ.
ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಇಂದು ಭಾರತ್ ಬಂದ್'ಗೆ ಕರೆ ನೀಡಿತ್ತು. ಸಾಕಷ್ಟು ಸಂಘ ಸಂಸ್ಥೆಗಳು ಈ ಪ್ರತಿಭಟನೆಗೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ.
ಈ ಬೆಳವಣಿಗೆ ಕುರಿತು ಗ್ವಾಲಿಯರ್ ನ ಕೃಷಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ತೋಮರ್ ಅವರು, ಪ್ರತಿಭಟನಾ ಹಾದಿ ಬಿಡುವಂತೆ ರೈತರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ರೈತರು ಎತ್ತಿರುವ ವಿರೋಧಗಳನ್ನು ಪರಿಗಣಿಸಲು ಸರ್ಕಾರ ಸಿದ್ಧವಿದೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಮಾತುಕತೆಗಳು ನಡೆದಿವೆ. ಇನ್ನೂ ಮಾತುಕತೆ ನಡೆಸಬೇಕೆಂದಿದ್ದರೆ, ಮಾತುಕತೆಗೆ ಸರ್ಕಾರ ಸಿದ್ಧವಿದೆ. ರೈತರ ಪ್ರತಿಭಟನೆ ರಾಜಕೀಯ ವಿಚಾರವಾಗಬಾರದು ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ ರಾಜಕೀಯದೊಂದಿಗೆ ಮಿಶ್ರಿತಗೊಳ್ಳಬಾರದು. ರೈತರು ಎಲ್ಲರಿಗೂ ಸೇರಿದವರಾಗಿದ್ದಾರೆ. ಸರ್ಕಾರವು ರೈತರ ಒಕ್ಕೂಟದೊಂದಿಗೆ ಬಹಳ ಸೂಕ್ಷ್ಮವಾಗಿ ಮಾತುಕತೆ ನಡೆಸಿದೆ ಮತ್ತು ಭವಿಷ್ಯದಲ್ಲಿಯೂ ಇದನ್ನು ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ