ಆನೆಗಳನ್ನು ಆತಂಕವಾದಿಯಂತೆ ಬಿಂಬಿಸಬೇಡಿ: ಹಿಂದಿ ಮಾಧ್ಯಮಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆ ಸೂಚನೆ

ಆನೆಗಳ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಬರೆಯುವುದರಿಂದ ಸಾರ್ವಜನಿಕರಲ್ಲಿ ಆನೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದು ವನ್ಯಜೀವಿ ತಜ್ಞರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದಿ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಆನೆಗಳ ಮೇಲೆ ಕೆಟ್ಟ ಭಾಷೆಯನ್ನು ಪ್ರಯೋಗಿಸುತ್ತಿರುವುದನ್ನು ಗಮನಿಸಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಈ ಬಗ್ಗೆ ಮಾಧ್ಯಮಗಳಿಗೆ ಸೂಚನೆ ನೀಡಿದೆ. 

ಆನೆಗಳ ಕುರಿತಾದ ಬಹುತೇಕ ಸುದ್ದಿಗಳಲ್ಲಿ ಆನೆಗಳನ್ನು ಉಲ್ಲೇಖಿಸುವಾಗ ಪ್ರಚೋದನಕಾರಿಯಾದ ಪದಗಳ ಬಳಕೆ ಮಾಡಿರುವುದನ್ನು ಇಲಾಖೆ ಪ್ರಶ್ನಿಸಿದೆ. ಈ ರೀತಿ ಆನೆಗಳ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಬರೆಯುವುದರಿಂದ ಸಾರ್ವಜನಿಕರಲ್ಲಿ ಆನೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದು ವನ್ಯಜೀವಿ ತಜ್ಞರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು. 

ಹಿಂದಿ ಮಾಧ್ಯಮಗಳಲ್ಲಿ ಆನೆಗಳನ್ನು ಆತಂಕವಾದಿ, ಉತ್ಪಾತಿ, ಹಿಂಸಾವಾದಿ, ಕೊಲೆಗಾರ ಎಂಬಿತ್ಯಾದಿ ಪದಗಳಿಂದ ವರ್ಣಿಸಿದ್ದವು. ಈ ಕುರಿತಾದ ಪತ್ರಿಕೆ ಸುದ್ದಿಗಳು ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ವರದಿ ಪ್ರತಿಗಳನ್ನು ವನ್ಯಜೀವಿ ತಜ್ಞ ನಿತಿನ್ ಸಿಂಘ್ವಿ ಎಂಬುವವರು ಪರಿಸರ ಮತ್ತು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com