ಸೋನಭದ್ರಾ: ಚಿಕಿತ್ಸೆಗಾಗಿ ಕರೆತರಲಾಗಿದ್ದ ವೇಳೆ ಜಿಲ್ಲಾ ಆಸ್ಪತ್ರೆಯಿಂದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿದ್ದಾನೆ ಎಂದು ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಪಾನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಲಲ್ಲು ಕೇವತ್ ಎಂಬಾತ 2020ರ ಏಪ್ರಿಲ್ 10 ರಿಂದ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.
ನಾಲ್ವರು ಕಾನ್‌ಸ್ಟೆಬಲ್‌ಗಳು ಆತನನ್ನು ಮಂಗಳವಾರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು.
ಪೆಥಾಲಜಿ ಬಳಿ ಲಲ್ಲು ಅವರನ್ನು ಕೂರಿಸಿಕೊಂಡಿರುವಾಗ ಕಾನ್ಸ್‌ಟೇಬಲ್ ಒಬ್ಬರು ಎಲ್ಲೋ ಹೋಗಿದ್ದರು. ಇದನ್ನೇ ನೋಡುತ್ತಿದ್ದ ಆತ ಪರಾರಿಯಾಗಿದ್ದಾನೆ. ಬಳಿಕ, ಕಾನ್‌ಸ್ಟೆಬಲ್‌ಗಳು ಆತನನ್ನು ಹುಡುಕಿದರು ಕೂಡ ಆತ ಪತ್ತೆಯಾಗಿಲ್ಲ ಎಂದು ಕುಮಾರ್ ಹೇಳಿದರು.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಲೋಪ ಎಸಗಿದ ಕಾನ್‌ಸ್ಟೆಬಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ವಿಚಾರಣಾಧೀನ ಲಲ್ಲುನನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement