ರಾಜಸ್ಥಾನ: ರಾಹುಲ್ ಜೊತೆಗೆ ಬುಡಕಟ್ಟು ನೃತ್ಯ ಮಾಡಿದ ಕಾಂಗ್ರೆಸ್ ಮುಖಂಡರು! ವಿಡಿಯೋ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ 'ಭಾರತ್ ಜೋಡೋ ಯಾತ್ರೆ'' ಭಾನುವಾರ ಸಂಜೆ ರಾಜಸ್ಥಾನ ಪ್ರವೇಶಿಸಿದೆ.
ರಾಹುಲ್ ಗಾಂಧಿ ಜೊತೆಗೆ ನೃತ್ಯ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು
ರಾಹುಲ್ ಗಾಂಧಿ ಜೊತೆಗೆ ನೃತ್ಯ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು
Updated on: 

ಜಲವಾರ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ 'ಭಾರತ್ ಜೋಡೋ ಯಾತ್ರೆ'' ಭಾನುವಾರ ಸಂಜೆ ರಾಜಸ್ಥಾನ ಪ್ರವೇಶಿಸಿದೆ.

ಮಧ್ಯಪ್ರದೇಶದಿಂದ ರಾಜಸ್ಥಾನದ ಜಲವಾರ್ ನಿದ ಅಂದಾಜು 40 ಕಿಲೋ ಮೀಟರ್ ದೂರದಲ್ಲಿರುವ ಚಾನ್ವಿಲಿ ಚೌರಾಹಾಗೆ ಆಗಮಿಸಿದ ರಾಹುಲ್ ಗಾಂಧಿ ಮತ್ತು ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜಸ್ಥಾನದ ಬುಡಕಟ್ಟು ಸಮುದಾಯದವರೊಂದಿಗೆ ನೃತ್ಯ ಮಾಡಿ, ಸಂಭ್ರಮಿಸಿದ್ದಾರೆ. ರಾಹುಲ್ ಜೊತೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಮತ್ತಿತರರು ಬುಡಕಟ್ಟು ನೃತ್ಯ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ರಾಜಸ್ಥಾನದಲ್ಲಿ 17 ದಿನಗಳ ಕಾಲ ನಡೆಯಲಿರುವ ಯಾತ್ರೆಯಲ್ಲಿ 500 ಕಿ.ಮೀ ದೂರ ಕ್ರಮಿಸಲು ಯೋಜಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com