ಗುಜರಾತ್‌ನ ವಡೋದರಾದಲ್ಲಿ ಲೈಸೆನ್ಸ್ ಇಲ್ಲದ ರಿವಾಲ್ವರ್‌ ಇಟ್ಟುಕೊಂಡಿದ್ದ ವಿದ್ಯಾರ್ಥಿ ಬಂಧನ

ಪರವಾನಗಿ ಇಲ್ಲದ ರಿವಾಲ್ವರ್ ಹೊಂದಿದ್ದ ವಿದ್ಯಾರ್ಥಿಯೊಬ್ಬನನ್ನು ಗುಜರಾತ್‌ನಲ್ಲಿ ಚುನಾವಣಾ ಕಣ್ಗಾವಲು ತಂಡವು ಬಂಧಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ಪರವಾನಗಿ ಇಲ್ಲದ ರಿವಾಲ್ವರ್ ಹೊಂದಿದ್ದ ವಿದ್ಯಾರ್ಥಿಯೊಬ್ಬನನ್ನು ಗುಜರಾತ್‌ನಲ್ಲಿ ಚುನಾವಣಾ ಕಣ್ಗಾವಲು ತಂಡವು ಬಂಧಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ವಿಭಾಗಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆ ಉಲ್ಲಂಘನೆಯ ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ.

ನಿಕೋಲ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಚುನಾವಣಾ ಕಣ್ಗಾವಲು ತಂಡದ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಹಿಮಾಂಶು ಪರ್ಮಾರ್ ಅವರು ತಮ್ಮ ತಂಡವು ಥಕ್ಕರ್‌ನಗರ ಚೌಕದಲ್ಲಿ ಕಾರನ್ನು ಅಡ್ಡಗಟ್ಟಿದೆ. ತಪಾಸಣೆ ನಡೆಸಿದಾಗ ಚಾಲಕನ ಸೀಟಿನ ಕೆಳಗೆ ಪಿಸ್ತೂಲಿನಂತಹ ಆಯುಧ ಪತ್ತೆಯಾಗಿದೆ. ಕಲ್ಪ್ ಪಾಂಡ್ಯ ಎಂಬಾತ ಕಾರು ಚಾಲನೆ ಮಾಡುತ್ತಿದ್ದು, ವಿಚಾರಣೆ ನಡೆಸಿದಾಗ ಆಯುಧ ತನಗೇ ಸೇರಿದ್ದು ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ತನ್ನ ಜೊತೆಗಿದ್ದ ಪೊಲೀಸ್ ಸಿಬ್ಬಂದಿ ಶಸ್ತ್ರಾಸ್ತ್ರ ಪರವಾನಗಿಯನ್ನು ಕೇಳಿದಾಗ, ಕಲ್ಪ್ ತನ್ನ ಬಳಿ ಇಲ್ಲ ಎಂದು ಹೇಳಿದ್ದಾನೆ. ಈ ಆಯುಧದ ಮಾರುಕಟ್ಟೆ ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ತಿಳಿಸಿದ್ದಾರೆ.

ಕಲ್ಪ್ ಅವರೊಂದಿಗೆ ಇತರ ಇಬ್ಬರು ಯುವಕರು ಮತ್ತು ಮಧ್ಯವಯಸ್ಕ ಮಹಿಳೆ ಕೂಡ ಕಾರಿನಲ್ಲಿದ್ದರು. ನಾಲ್ವರೂ ವಡೋದರಾ ನಗರದ ಮಂಜಲ್‌ಪುರ ಪ್ರದೇಶಕ್ಕೆ ಸೇರಿದವರಾಗಿದ್ದು, ವೈಯಕ್ತಿಕ ಕೆಲಸದ ಮೇಲೆ ಅಹಮದಾಬಾದ್‌ಗೆ ಬಂದಿದ್ದರು.

ಸ್ಥಾಯಿ ಕಣ್ಗಾವಲು ತಂಡವು ಕಲ್ಪ್ ಮತ್ತು ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರವನ್ನು ನಿಕೋಲ್ ಪೊಲೀಸರಿಗೆ ಹಸ್ತಾಂತರಿಸಿತು. ಪೊಲೀಸ್ ಇನ್ಸ್ ಪೆಕ್ಟರ್ ಕೆ.ಡಿ. ಜಾತ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com