ತಿಹಾರ್‌ ಜೈಲಿನಿಂದಲೇ ತನ್ನ ಸಾಮ್ರಾಜ್ಯ ಮುನ್ನಡೆಸಿದ್ದ 'ಬಿಕಿನಿ ಕಿಲ್ಲರ್' ಚಾರ್ಲ್ಸ್ ಶೋಭರಾಜ್

'ದಿ ಸರ್ಪೆಂಟ್' ಅಥವಾ 'ದಿ ಬಿಕಿನಿ ಕಿಲ್ಲರ್' ಎಂದೇ ಕುಖ್ಯಾತಿ ಪಡೆದಿರುವ ಸೀರಿಯಲ್ ಕಿಲ್ಲರ್ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಗುರುಮುಖ್ ಶೋಭರಾಜ್ ಈಗ ಸ್ವತಂತ್ರ ವ್ಯಕ್ತಿ. ಬರೊಬ್ಬರಿ 20 ವರ್ಷಗಳ ಜೈಲು ವಾಸದ ನಂತರ ಆತ ಬಿಡುಗಡೆಯಾಗಿದ್ದಾನೆ.
ಚಾರ್ಲ್ಸ್ ಶೋಭರಾಜ್ (ಸಂಗ್ರಹ ಚಿತ್ರ)
ಚಾರ್ಲ್ಸ್ ಶೋಭರಾಜ್ (ಸಂಗ್ರಹ ಚಿತ್ರ)

ನವದೆಹಲಿ: 'ದಿ ಸರ್ಪೆಂಟ್' ಅಥವಾ 'ದಿ ಬಿಕಿನಿ ಕಿಲ್ಲರ್' ಎಂದೇ ಕುಖ್ಯಾತಿ ಪಡೆದಿರುವ ಸೀರಿಯಲ್ ಕಿಲ್ಲರ್ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಗುರುಮುಖ್ ಶೋಭರಾಜ್ ಈಗ ಸ್ವತಂತ್ರ ವ್ಯಕ್ತಿ. ಬರೊಬ್ಬರಿ 20 ವರ್ಷಗಳ ಜೈಲು ವಾಸದ ನಂತರ ಆತ ಬಿಡುಗಡೆಯಾಗಿದ್ದಾನೆ.

ಇಬ್ಬರು ಉತ್ತರ ಅಮೆರಿಕನ್ನರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಶೋಭರಾಜ್ ಇದೀಗ 19 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ನೇಪಾಳದ ಕಠ್ಮಂಡು ಜೈಲಿನಿಂದ ಅಂತಿಮವಾಗಿ ಬಿಡುಗಡೆಯಾಗಿದ್ದಾನೆ. ಕಠ್ಮಂಡುವಿನಲ್ಲಿ ಆತನಿಗೆ ಶಿಕ್ಷೆಯಾಗುವ ಮೊದಲು, ಶೋಭರಾಜ್ ಭಾರತದಲ್ಲಿಯೂ ಸಹ ಅಪರಾಧಿಯಾಗಿದ್ದನು ಮತ್ತು ದೆಹಲಿಯಲ್ಲಿ ದೇಶದ ಉನ್ನತ ಭದ್ರತೆಯಡಿಯಲ್ಲಿ ಆತ ತಿಹಾರ್ ಜೈಲಿನಲ್ಲಿ ಎರಡು ದಶಕ ಸಮಯ ಕಳೆದಿದ್ದನು, ಅಲ್ಲಿ ಅವನನ್ನು ತಿಳಿದ ಅಧಿಕಾರಿಗಳು, ಆತ ಜೈಲಿನಿಂದಲೇ ತನ್ನ ಭೂಗತ "ಸಾಮ್ರಾಜ್ಯವನ್ನು" ನಿರ್ವಹಿಸುತ್ತಿದ್ದ ಎಂದು ಹೇಳಿದ್ದಾರೆ.

ಸರಣಿ ಹಂತಕನ ಪ್ರಕರಣದಲ್ಲಿ ಕೆಲಸ ಮಾಡಿದ ಅಂದಿನ ಉಪ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಅಮೋದ್ ಕಾಂತ್ ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಪ್ರತ್ಯೇಕವಾಗಿ ಮಾತನಾಡುವಾಗ ಚಾರ್ಲ್ಸ್ ಶೋಭರಾಜ್ ಮಾಡಿದ ಘೋರ ಅಪರಾಧಗಳನ್ನು ನೆನಪಿಸಿಕೊಂಡರು, ಅವರನ್ನು ವಂಚಕ ಮತ್ತು ಕೊಲೆಗಾರ ಎಂದು ನೆನಪಿಸಿಕೊಂಡರು.'

ಆರಂಭಿಕ ದಿನಗಳು
ಶೋಭರಾಜ್ ವಿಯೆಟ್ನಾಂನಲ್ಲಿ ಭಾರತೀಯ ವ್ಯಕ್ತಿ ಮತ್ತು ಫ್ರೆಂಚ್ ತಾಯಿಗೆ ಜನಿಸಿದ. 60 ರ ದಶಕದ ಆರಂಭದಲ್ಲಿ ಭಾರತಕ್ಕೆ ಬರುವ ಮೊದಲು, ಆತ ಬಾಲಾಪರಾಧಿಯಾಗಿದ್ದ. ಸಣ್ಣ ಅಪರಾಧಗಳ ಮೂಲಕ, ಆತ ಸಣ್ಣ ಮೊತ್ತವನ್ನು ಗಳಿಸುತ್ತಿದ್ದ, ಅದು ಆತನಿಗೆ ಭಾರತವನ್ನು ತಲುಪಲು ಸಹಾಯ ಮಾಡಿತು. ಆದರೆ ಆತ ಮತ್ತೆ ಶೀಘ್ರದಲ್ಲೇ ಮರಳಿದ್ದ. ವಿಜ್ಞಾನದಲ್ಲಿ ಪದವಿ ಪಡೆದ ನಂತರ, ಶೋಭರಾಜ್ 1967 ರ ಸುಮಾರಿಗೆ ಮತ್ತೆ ಭಾರತಕ್ಕೆ ಬಂದ. ನವೆಂಬರ್ 1971 ರಲ್ಲಿ, ಆತನನ್ನು ಮೊದಲ ಬಾರಿಗೆ ದೆಹಲಿ ಪೊಲೀಸರು ಬಂಧಿಸಿದರು ಮತ್ತು ಪಾಸ್‌ಪೋರ್ಟ್ ಹೊಂದಿಲ್ಲದ ಕಾರಣಕ್ಕಾಗಿ ನಗರದ ರಾಜತಾಂತ್ರಿಕ ಚಾಣಕ್ಯಪುರಿ ಪ್ರದೇಶದ ಬಳಿ ಬಂಧಿಸಲಾಗಿತ್ತು. 

ಆದರೆ ಶೋಭರಾಜ್, ಕುತಂತ್ರಿ ವ್ಯಕ್ತಿಯಾಗಿದ್ದು, ಸುಳ್ಳು ಆರೋಗ್ಯ ಸಮಸ್ಯೆಯ ನೆಪವೊಡ್ಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ಮಾಡಿದ್ದ. ಆದರೆ ಮಾರ್ಗ ಮಧ್ಯೆ ಪೋಲೀಸ್ ಕಸ್ಟಡಿಯಿಂದ ಪಲಾಯನ ಮಾಡಿದ್ದ. ಇದು ಆತನ ಸಾರ್ವಕಾಲಿಕ ಸುಲಭದ ತಂತ್ರಗಳಲ್ಲಿ ಒಂದಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ. ಶೋಭರಾಜ್ ಅಪರಾಧ ಲೋಕ ಸೃಷ್ಟಿಯಾಗಿದ್ದೇ ಇಲ್ಲಿಂದ... ಮುಂದಿನ 8-9 ವರ್ಷಗಳವರೆಗೆ, ಚಾರ್ಲ್ಸ್, ಹಲವಾರು ಬಾರಿ ಜೈಲು ನೋಡಿ ಬಂದಿದ್ದ. 

ವಿದೇಶಿಯರಿಗೆ ವಿಷ ಪ್ರಾಶನ
ಮಾಜಿ IPS ಅಧಿಕಾರಿ ಅಮೋದ್ ಕಾಂತ್ 1974 ರಲ್ಲಿ ಸೇವೆಗೆ ಸೇರಿದ್ದರು ಮತ್ತು ನಂತರ ಅವರನ್ನು ನವದೆಹಲಿಯಲ್ಲಿ ಅವರ ತರಬೇತಿ ಅವಧಿಗೆ ನಿಯೋಜಿಸಲಾಯಿತು. ಅದೇ ಅವಧಿಯಲ್ಲಿ, YMCA ದೆಹಲಿಯಲ್ಲಿ ವಾಸಿಸುತ್ತಿದ್ದ ಫ್ರೆಂಚ್ ಪ್ರವಾಸಿಗರ ಗುಂಪಿಗೆ ವಿಷ ಹಾಕಿದ್ದ ಪ್ರಕರಣದಲ್ಲಿ ಶೋಭರಾಜ್ ಆರೋಪಿಯಾಗಿದ್ದ. ಇದು ಆತ ಮಾಡಿದ ಮೊಟ್ಟ ಮೊದಲ ಅತ್ಯಂತ ಗಂಭೀರವಾದ ಅಪರಾಧವಾಗಿತ್ತು. ಆತ ತನ್ನನ್ನು ತಾನು ಆಕರ್ಷಕ ವ್ಯಕ್ತಿಯಂತೆ ತೋರಿಸಿಕೊಳ್ಳುತ್ತಿದ್ದನು. ಅವನು ವಿದೇಶಿಯರೊಂದಿಗೆ ಸ್ನೇಹ ಬೆಳೆಸಿ, ಮಾದಕವಸ್ತು ನೀಡಿ ಅವರನ್ನು ಲೂಟಿ ಮಾಡುತ್ತಿದ್ದನು. ಇದು ಅವನ ಕಾರ್ಯ ವಿಧಾನವಾಗಿತ್ತು. ನನಗೆ ತಿಳಿದಿರುವಂತೆ, ಅವನು ಸುಮಾರು 22 ಜನರನ್ನು ಕೊಂದಿದ್ದಾನೆ. ಅವನು ನಿರ್ದಯ ಕೊಲೆಗಾರ" ಎಂದು ಕಾಂತ್ ಹೇಳಿದರು.

ನಂತರ, ಅಕ್ಟೋಬರ್ 1981 ರಲ್ಲಿ ದೆಹಲಿ ನ್ಯಾಯಾಲಯವು ಚಾರ್ಲ್ಸ್‌ನನ್ನು ದೋಷಿ ಎಂದು ಘೋಷಿಸಿತು ಮತ್ತು ಐದು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಕಳುಹಿಸಿತು. ನಂತರ 1986 ರಲ್ಲಿ, ಚಾರ್ಲ್ಸ್ ಏನು ಮಾಡಿದ? ಆತನ ಮುಂದಿನ ಅಪರಾಧ ಜಗತ್ತು ಸಾರ್ವಕಾಲಿಕ ಕುತಂತ್ರದ ಅಪರಾಧಿಗಳ ಇತಿಹಾಸದಲ್ಲಿ ಆತನ ಹೆಸರು ಕೆತ್ತುವಂತೆ ಮಾಡಿತು.

ಇದನ್ನೂ ಓದಿ: ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದುಪಡಿಸಿದ ಸುಪ್ರೀಂ ಕೋರ್ಟ್!
 
ಜೈಲಿಂದ ಪರಾರಿ
ಚಾರ್ಲ್ಸ್ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಅವಧಿಯಲ್ಲಿ, ಕೆಲವು ಭಯಾನಕ ಖೈದಿಗಳನ್ನು ಒಳಗೊಂಡಂತೆ ಅಲ್ಲಿನ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಆತ ಬಾಂಧವ್ಯ ಬೆಳೆಸಿಕೊಂಡಿದ್ದ. ಆತ ಎಲ್ಲರೊಂದಿಗೆ ಸ್ನೇಹ ಬೆಳೆಸಿದ್ದ ಮತ್ತು ನಿಜ ಹೇಳಬೇಕು ಎಂದರೆ ಪ್ರಾಯೋಗಿಕವಾಗಿ ಜೈಲನ್ನು ನಿಯಂತ್ರಿಸುತ್ತಿದ್ದ. ಅಲ್ಲದೆ ಆತ ತಿಹಾರ್ ಜೈಲಿನಿಂದಲೇ ತನ್ನ ಭೂಗತ ಸಾಮ್ರಾಜ್ಯವನ್ನು ನಿರ್ವಹಿಸುತ್ತಿದ್ದ" ಎಂದು ಮಾಜಿ ಐಪಿಎಸ್ ಅಧಿಕಾರಿ ಹೇಳಿದರು.

ನಂತರ 1986 ರಲ್ಲಿ ಒಂದು ದಿನ ವರ್ಷಗಳ ಕಾಲ ನಿಖರವಾದ ಯೋಜನೆಯ ನಂತರ ಚಾರ್ಲ್ಸ್, ಅತ್ಯಂತ ಭದ್ರತೆಯ ತಿಹಾರ್ ಜೈಲಿನಿಂದ ಪಲಾಯನ ಮಾಡಿದ್ದ. ಆದಾಗ್ಯೂ, ಗೋವಾದಿಂದ 22 ದಿನಗಳ ನಂತರ ಆಗಿನ ಡಿಸಿಪಿ ಕಾಂತ್ ಅತನನ್ನು ಹಿಡಿದು ಮತ್ತೆ ಜೈಲಿಗಟ್ಟಿದ್ದರು. ತಿಹಾರ್ ಜೈಲಿನಲ್ಲಿ ಅವನ ಹಿಡಿತ ಹೇಗಿತ್ತು ಎಂದರೆ, ಚಾರ್ಲ್ಸ್, ದೇಶ-ನಿರ್ಮಿತ ಪಿಸ್ತೂಲ್ ಮತ್ತು ಗ್ರೆನೇಡ್ ಅನ್ನು ಜೈಲಿನಿಂದಲೇ ಹೊತ್ತೊಯ್ದಿದ್ದ. ಮತ್ತು ಅಂದು ಇತರ ಐದು ಕೈದಿಗಳೊಂದಿಗೆ ತಪ್ಪಿಸಿಕೊಳ್ಳಲು ನಿಖರವಾಗಿ ಯೋಜನೆ ರೂಪಿಸಿದ್ದ. ಮಾರ್ಚ್ 16, 1986 ರಂದು, ಅದಾಗಲೇ ಆತ 1000 ಕ್ಕೂ ಹೆಚ್ಚು ಲಾರ್ಪೋಜ್ (ಸ್ಲೀಪಿಂಗ್ ಮಾತ್ರೆಗಳು) ಮಾತ್ರೆಗಳನ್ನು ಸಂಗ್ರಹಿಸಿದ್ದ. ಅವುಗಳನ್ನು ಸೀತಾಫಲ ಮತ್ತು ಕೆಲವು ಸಿಹಿತಿಂಡಿಗಳೊಂದಿಗೆ ಬೆರೆಸಿ ತಿಹಾರ್ ಜೈಲಿನಲ್ಲಿ ತನ್ನ ದಾರಿಯಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗೆ ನೀಡಿದ್ದ. ಎಲ್ಲರೂ ಮತ್ತಿನಲ್ಲಿ ಮಲಗಿದ್ದಾಗ ಆತ ಮಾತ್ರ ಜೈಲಿನಿಂದ ಪರಾರಿಯಾಗಿದ್ದ ಎಂದು ಕಾಂತ್ ಹೇಳಿದ್ದಾರೆ.

ತನ್ನ ಎಲ್ಲಾ ಪ್ರಮುಖ ಪ್ರಕರಣಗಳ ಕುರಿತು ಪುಸ್ತಕವನ್ನು ಬರೆಯುತ್ತಿರುವ ಕಾಂತ್, ತಮ್ಮ ವೃತ್ತಿ ಜೀವನದ ಉತ್ತಮ ದಿನ ಮತ್ತು ಅಪರಾಧಿ ಕೊಲೆಗಾರನ ಬಂಧನದ ವಿವರಗಳನ್ನು ನಿಖರವಾಗಿ ಹಂಚಿಕೊಂಡಿದ್ದಾರೆ. "ಚಾರ್ಲ್ಸ್ ತಿಹಾರ್‌ನಿಂದ ತಪ್ಪಿಸಿಕೊಂಡಾಗ, ಪ್ರಕರಣವನ್ನು ನನಗೆ ಹಸ್ತಾಂತರಿಸಲಾಯಿತು ಮತ್ತು ನಾವು ಆತನ ಬಗ್ಗೆ ದೆಹಲಿ ಪೊಲೀಸ್ ದಸ್ತಾವೇಜಿನಲ್ಲಿ ಆತನ ದಾಖಲೆಯನ್ನು ಹುಡುಕಲು ಪ್ರಾರಂಭಿಸಿದ್ದೆವು. ಆದರೆ ಯಾವುದೇ ಮಾಹಿತಿ ಇರಲಿಲ್ಲ. ಚಾರ್ಲ್ಸ್ ಬಗ್ಗೆ ಹೆಚ್ಚಿನ ಮಾಹಿತಿಯು 1979 ರಲ್ಲಿ ಪ್ರಕಟವಾದ 'ದಿ ಸರ್ಪೆಂಟೈನ್' ಅಥವಾ 'ದಿ ಬಿಕಿನಿ ಮರ್ಡರ್ಸ್' ನಂತಹ ಪುಸ್ತಕಗಳಲ್ಲಿ ಲಭ್ಯವಿದೆ. ಆತ ಜೈಲಿನಲ್ಲಿದ್ದಾಗ, ಅವರೇ ಈ ಕಥೆಗಳನ್ನು ಸೃಷ್ಟಿಸಿದರು ಮತ್ತು ಅವರ ಶೋಷಣೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು," ಎಂದು ಕಾಂತ್ ಹೇಳಿದರು.

ಪ್ರಕರಣವನ್ನು ಭೇದಿಸಲು ಮೊದಲಿಗೆ ತಿಹಾರ್ ಜೈಲಿನ ಅಧಿಕಾರಿಗಳು ಮತ್ತು ಕೆಲವು ಕೈದಿಗಳನ್ನು ವಿಚಾರಣೆ ನಡೆಸಲಾಯಿತು. "ಕೊನೆಗೆ ಚಾರ್ಲ್ಸ್ ಮುಂಬೈನಲ್ಲಿ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಸುಳಿವು ಸಿಕ್ಕಿತು. ನಾನು ಅಂದಿನ ಡಿಜಿಪಿ ಮಹಾರಾಷ್ಟ್ರವನ್ನು ಸಂಪರ್ಕಿಸಿದೆ ಮತ್ತು ಪರಾರಿಯಾದವರಲ್ಲಿ ಒಬ್ಬರು ಸಿಕ್ಕಿಬಿದ್ದರು, ಆದರೆ ಚಾರ್ಲ್ಸ್ ಮಾತ್ರ ಸಿಕ್ಕಿರಲಿಲ್ಲ" ಎಂದು ಕಾಂತ್ ಹೇಳಿದರು.

ಮತ್ತೊಬ್ಬ ರೈಲ್ವೇ ಪೊಲೀಸರ ಕೈಗೆ ಮುಂಬೈನ ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಆತನ ವಿಚಾರಣೆಯ ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ತನಿಖಾ ತಂಡಗಳನ್ನು ಗೋವಾಕ್ಕೆ ಕರೆದೊಯ್ಯಲಾತು, ಅಲ್ಲಿಂದ ಚಾರ್ಲ್ಸ್ ತಿಹಾರ್‌ನಿಂದ ಓಡಿಹೋದ 22 ದಿನಗಳ ನಂತರ ಅವನನ್ನು ಬಂಧಿಸಲಾಯಿತು ಎಂದು ಹೇಳಿದರು.

ವಿಚಾರಣೆ
ಅತ್ಯಂತ ಬುದ್ಧಿವಂತ ಕ್ರಿಮಿನಲ್ ಆಗಿರುವ ಚಾರ್ಲ್ಸ್ ನನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಒದಗಿಸಿದ ವಿಶೇಷ ವಿಮಾನದಲ್ಲಿ ಐಪಿಎಸ್ ಅಧಿಕಾರಿ ಕಾಂತ್ ಅವರು ಮರಳಿ ದೆಹಲಿಗೆ ಕರೆತಂದರು. ಈ ವೇಳೆ ಮಾಧ್ಯಮಗಳು ಅವನಿಗೆ ತುಂಬಾ ಪ್ರಚಾರ ನೀಡಿದ್ದವು, ಆದ್ದರಿಂದ ಅವನ ಅಹಂ ಮುರಿಯಲು, ನಾನು ವಿಚಾರಣೆಯ ಸಮಯದಲ್ಲಿ ಅವನನ್ನು ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಿದ್ದೆ. ಅವನು ಕುಶಲ ಮತ್ತು ವಂಚಕ" ಎಂದು ಮಾಜಿ ಹಿರಿಯ ಅಧಿಕಾರಿ ಹೇಳಿದರು. ಮಾಹಿತಿಯನ್ನು ಹೊರತೆಗೆಯಲು ಯಾವುದೇ ಬಲವನ್ನು ಬಳಸುವುದರ ಕುರಿತು ಕೇಳಿದಾಗ, "ಎಲ್ಲವೂ ಅಲ್ಲ. ಆತ ಹೊಡೆದರೆ ಹೆದರುತ್ತಿದ್ದ. ನಾನು ಅವನ ಮೇಲೆ ಥರ್ಡ್ ಡಿಗ್ರಿ ಬಳಕೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com