ಕೋವಿಡ್-19: ದೇಶದಲ್ಲಿ 17,092 ಹೊಸ ಪ್ರಕರಣಗಳು, 29 ಸಾವು

ದೇಶದಲ್ಲಿ 17 ಸಾವಿರದ 92 ಹೊಸ ಕೋವಿಡ್ ಪ್ರಕರಣ ದಾಖಲಿಸಿದೆ, ಈ ಮೂಲಕ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ  4 ಕೋಟಿಯ 34 ಲಕ್ಷದ 86 ಸಾವಿರದ 326 ಕ್ಕೆ ಏರಿದೆ, ಸಕ್ರಿಯ ಪ್ರಕರಣಗಳು 1,09,568 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ 17 ಸಾವಿರದ 92 ಹೊಸ ಕೋವಿಡ್ ಪ್ರಕರಣ ದಾಖಲಿಸಿದೆ, ಈ ಮೂಲಕ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ  4 ಕೋಟಿಯ 34 ಲಕ್ಷದ 86 ಸಾವಿರದ 326 ಕ್ಕೆ ಏರಿದೆ, ಸಕ್ರಿಯ ಪ್ರಕರಣಗಳು 1,09,568 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 29 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 5,25,168 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಶೇಕಡಾ 0.25 ಪ್ರತಿಶತವನ್ನು ಒಳಗೊಂಡಿವೆ.

ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು ಶೇಕಡಾ 98.54 ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ 2,379 ನಷ್ಟು ದಾಖಲಾಗಿದೆ.

ದೇಶದಲ್ಲಿ ದೈನಂದಿನ ಸಕಾರಾತ್ಮಕತೆಯ ದರವು ಶೇಕಡಾ 4.14 ರಷ್ಟಿದ್ದರೆ, ವಾರದ ಸಕಾರಾತ್ಮಕತೆಯ ದರವು ಶೇಕಡಾ 3.56 ರಷ್ಟಿದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 4,28,51,590 ಕ್ಕೆ ಏರಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.21 ರಷ್ಟಿತ್ತು.

ರಾಷ್ಟ್ರವ್ಯಾಪಿ ಕೋವಿಡ್-19 ಅಡಿಯಲ್ಲಿ ಇದುವರೆಗೆ ದೇಶದಲ್ಲಿ 197.84 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿಯನ್ನು ದಾಟಿತ್ತು. 

ಮೇ 4, 2021 ರಂದು ದೇಶದಲ್ಲಿ ಎರಡು ಕೋಟಿ ಸೋಂಕಿತರಿದ್ದರು. ಕಳೆದ ವರ್ಷ ಜೂನ್ 23 ರಂದು ಮೂರು ಕೋಟಿ ಪ್ರಕರಣಗಳು ಮತ್ತು ಈ ವರ್ಷದ ಜನವರಿ 25 ರಂದು ನಾಲ್ಕು ಕೋಟಿ ಪ್ರಕರಣಗಳ ಮೈಲಿಗಲ್ಲನ್ನು ದಾಟಿದೆ.

29 ಹೊಸ ಸಾವುಗಳಲ್ಲಿ ಕೇರಳದಲ್ಲಿ 15, ಮಹಾರಾಷ್ಟ್ರದಲ್ಲಿ 4, ದೆಹಲಿಯಲ್ಲಿ ಮೂರು, ಪಂಜಾಬ್‌ ನಲ್ಲಿ ಇಬ್ಬರು ಮತ್ತು ಛತ್ತೀಸ್‌ಗಢ, ಬಿಹಾರ, ಗುಜರಾತ್, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com