ಶಾಲಾ ನೇಮಕಾತಿ ಹಗರಣ: ಬಂಧಿತ ಬಂಗಾಳ ಸಚಿವ ಚಟರ್ಜಿ ನಿಕಟವರ್ತಿ ಅರ್ಪಿತಾ ಫ್ಲಾಟ್ ನಲ್ಲಿ ಮತ್ತೆ ಕೋಟ್ಯಂತರ ನಗದು ಪತ್ತೆ

ಪಶ್ಚಿಮ ಬಂಗಾಳದ ಶಾಲಾ ಉದ್ಯೋಗ ಹಗರಣದ ಪ್ರಮುಖ ಆರೋಪಿ ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾ ಮುಖರ್ಜಿ ಫ್ಲಾಟ್ ನಲ್ಲಿ ಮತ್ತೆ ಕೋಟ್ಯಂತರ ನಗದು ಪತ್ತೆಯಾಗಿದೆ.
ಚಟರ್ಜಿ ನಿಕಟವರ್ತಿ ಅರ್ಪಿತಾ ಫ್ಲಾಟ್ ನಲ್ಲಿ ಮತ್ತೆ ಹಣ ಪತ್ತೆ
ಚಟರ್ಜಿ ನಿಕಟವರ್ತಿ ಅರ್ಪಿತಾ ಫ್ಲಾಟ್ ನಲ್ಲಿ ಮತ್ತೆ ಹಣ ಪತ್ತೆ
Updated on

ನವದೆಹಲಿ: ಪಶ್ಚಿಮ ಬಂಗಾಳದ ಶಾಲಾ ಉದ್ಯೋಗ ಹಗರಣದ ಪ್ರಮುಖ ಆರೋಪಿ ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾ ಮುಖರ್ಜಿ ಫ್ಲಾಟ್ ನಲ್ಲಿ ಮತ್ತೆ ಕೋಟ್ಯಂತರ ನಗದು ಪತ್ತೆಯಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ)ವು ಇದೀಗ ಬಂಧಿತ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರಿಗೆ ಸಂಬಂಧಿಸಿದ ಮತ್ತೊಂದು ಫ್ಲಾಟ್ ನಲ್ಲಿ ಮತ್ತಷ್ಟು ಕೋಟ್ಯಂತರ ನಗದನ್ನು ವಶಪಡಿಸಿಕೊಳ್ಳಲಾಗಿದೆ. 

ಮೂಲಗಳ ಪ್ರಕಾರ ಇಡಿ ಅಧಿಕಾರಿಗಳು ಬೆಲ್‌ಘಾರಿಯಾ ಟೌನ್ ಕ್ಲಬ್‌ನಲ್ಲಿರುವ ಅರ್ಪಿತಾ ಅವರ ಫ್ಲಾಟ್ ಅನ್ನು ಪರಿಶೀಲಿಸುವಾಗ ಶೆಲ್ಫ್‌ನಲ್ಲಿ ನೋಟುಗಳ ಕಂತೆಗಳನ್ನು ಪತ್ತೆ ಹಚ್ಚಿದ್ದು, ಎಣಿಕೆ ಯಂತ್ರಗಳೊಂದಿಗೆ ಸ್ಥಳಕ್ಕೆ ಆಗಮಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತೆಯೇ ಈ ವರೆಗೆ ಎಣಿಸಲಾದ ಹಣಗಳ ಪ್ರಮಾಣವೇ 15 ಕೋಟಿ ರೂ ಗಳಾಗಿದ್ದು, ಇನ್ನೂ ನಗದು ಎಣಿಕಾ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಲಾಗಿದೆ. ಅರ್ಪಿತಾ ಅವರ ಮನೆಯ ಒಂದು ಕೊಠಡಿಯಲ್ಲಿ ಮನೆಯಲ್ಲಿ 21 ಕೋಟಿ ರೂ. ಪತ್ತೆಯಾದ ಬಳಿಕ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಶನಿವಾರ ಬಂಧನಕ್ಕೊಳಗಾಗಿದ್ದ ನಂತರ ಇತ್ತೀಚಿನ ಬೆಳವಣಿಗೆ ನಡೆದಿದೆ. 

ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ಮನೆ ಮತ್ತು ಇತರ ಆಸ್ತಿಗಳನ್ನು ಹಣ ಮತ್ತು ಗೌಪ್ಯ ದಾಖಲೆಗಳನ್ನು ಸಂಗ್ರಹಿಸಲು ಮಿನಿ ಬ್ಯಾಂಕ್ ಆಗಿ ಬಳಸಿದ್ದಾರೆ ಎಂದು ಅರ್ಪಿತಾ ಮುಖರ್ಜಿ ಕೇಂದ್ರ ಸಂಸ್ಥೆಗೆ ತಿಳಿಸಿದ್ದಾರೆ. ಈ ಹಣ ರಾಜ್ಯದ ಬೃಹತ್ ಶಿಕ್ಷಕರ ನೇಮಕಾತಿ ಹಗರಣದ ಕಿಕ್‌ಬ್ಯಾಕ್ ಆಗಿದೆ ಎಂದು ಅರ್ಪಿತಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. 

ಹಣವಿದ್ದ ರೂಮಿನ ಬಾಗಿಲು ಒಡೆದ ಅಧಿಕಾರಿಗಳು
ಬೆಲ್ಘೋರಿಯಾದ ರತ್ತಲಾ ಪ್ರದೇಶದಲ್ಲಿ ಎರಡು ಫ್ಲಾಟ್‌ಗಳಲ್ಲಿ ಹಣವಿದೆ ಎಂದು ಹೇಳಲಾಗಿದ್ದ ರೋಮಿನ ಬಾಗಿಲಿಗೆ ಬೀಗ ಹಾಕಲಾಗಿತ್ತು. ಈ ಬೀಗ ತೆರೆಯಲು ಸಾಧ್ಯವಾಗದೇ ಇದ್ದಾಗ ಇಡಿ ಅಧಿಕಾರಿಗಳು ರೂಮಿನ ಬೀಗ ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ರೂಮಿನಲ್ಲಿ ಅಡಗಿಸಿಡಲಾಗಿದ್ದ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಹಣವನ್ನು ಎಣಿಸಲು ಮೂರು ನೋಟು ಎಣಿಕೆ ಯಂತ್ರಗಳನ್ನು ತರಿಸಿದ್ದಾರೆ. ಶೋಧದ ವೇಳೆ ಫ್ಲಾಟ್‌ಗಳಲ್ಲಿ ಹಲವಾರು "ಪ್ರಮುಖ" ದಾಖಲೆಗಳು ಸಹ ವಶಕ್ಕೆ ಪಡೆದಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಮುಖರ್ಜಿ ಅವರು ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ತಮ್ಮ ಆಸ್ತಿಗಳ ಬಗ್ಗೆ ಇಡಿ ಅಧಿಕಾರಿಗಳಿಗೆ ಅರ್ಪಿತಾ ಮುಖರ್ಜಿ ಮಾಹಿತಿ ನೀಡಿದ್ದರು. ಬುಧವಾರ ಬೆಳಗ್ಗೆಯಿಂದ ಸಂಸ್ಥೆಯು ಆ ಆಸ್ತಿಗಳ ಮೇಲೆ ದಾಳಿ ನಡೆಸುತ್ತಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com