
ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿರುವಂತೆಯೇ ಮಹಾ ಆಘಾದಿ ಸರ್ಕಾರದ ಪಾಲುದಾರ ಪಕ್ಷ ಎನ್ ಸಿಪಿ ಇಂದು ಸಂಜೆ 5 ಗಂಟೆಗೆ ಸಭೆ ಆಯೋಜಿಸಿದೆ.
ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿವರಿಸಲು ನಮ್ಮ ಎಲ್ಲಾ ಶಾಸಕರನ್ನು ಸಭೆಗೆ ಆಹ್ವಾನಿಸಿದ್ದೇನೆ ಎಂದು ಎನ್‌ಸಿಪಿಯ ಮುಖಂಡ ಜಯಂತ್ ಪಾಟೀಲ್ ಸುದ್ದಿಗಾರರಿಗೆ ಹೇಳಿದರು.
ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಪಕ್ಷದ ಸಂಸದರು ಸಹ ಸಭೆಯಲ್ಲಿ ಇರುತ್ತಾರೆ.ಈಗಾಗಲೇ ನಾವು ಶರದ್ ಪವಾರ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದು, ಕಳೆದ 3-4 ದಿನಗಳಲ್ಲಿ ನಡೆದ ಘಟನೆಗಳ ಮೌಲ್ಯಮಾಪನ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರ ಉಳಿಯಲು ಮಾಡಬೇಕಾದ ಎಲ್ಲ ಪ್ರಯತ್ನವನ್ನು ನಾವು ಮಾಡಬೇಕು ಎಂದು ಪವಾರ್ ಸಾಹಿಬ್ ನಮಗೆ ಹೇಳಿದ್ದಾರೆ. ನಾವು ಉದ್ಧವ್ ಠಾಕ್ರೆ ಅವರೊಂದಿಗೆ ಈ ಸರ್ಕಾರದೊಂದಿಗೆ ನಿಲ್ಲುತ್ತೇವೆ ಎಂದು ಪಾಟೀಲ್ ಹೇಳಿದರು.
Advertisement