2003ರ ದಮನ್ ಸೇತುವೆ ಕುಸಿತದಿಂದ ಗುಜರಾತ್ ಸರ್ಕಾರ ಪಾಠ ಕಲಿತಿಲ್ಲ: ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ

ದಮನ್‌ನಲ್ಲಿ 2003ರ ಅಕ್ಟೋಬರ್ 28 ರಂದು ಇದೇ ರೀತಿಯ ದುರಂತಕ್ಕೆ 30 ಜನರನ್ನು ಕಳೆದುಕೊಂಡಿದ್ದರೂ, ಯಾವುದೇ ಪಾಠಗಳನ್ನು ಕಲಿಯಲಿಲ್ಲ ಎಂಬುದನ್ನು 141 ಜನರ ಜೀವಗಳನ್ನು ಬಲಿಪಡೆದ ಮೊರ್ಬಿ ಸೇತುವೆ ಕುಸಿತವು ತಿಳಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ದಮನ್: ದಮನ್‌ನಲ್ಲಿ 2003ರ ಅಕ್ಟೋಬರ್ 28 ರಂದು ಇದೇ ರೀತಿಯ ದುರಂತಕ್ಕೆ 30 ಜನರನ್ನು ಕಳೆದುಕೊಂಡಿದ್ದರೂ, ಯಾವುದೇ ಪಾಠಗಳನ್ನು ಕಲಿಯಲಿಲ್ಲ ಎಂಬುದನ್ನು 141 ಜನರ ಜೀವಗಳನ್ನು ಬಲಿಪಡೆದ ಮೊರ್ಬಿ ಸೇತುವೆ ಕುಸಿತವು ತಿಳಿಸುತ್ತದೆ.

ಸೇತುವೆ ಕುಸಿತದಲ್ಲಿ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕೇಶವಭಾಯ್ ಬಟಕ್ ಅವರು, ದಮನ್ ಘಟನೆಯನ್ನು ನೆನಪಿಸಿಕೊಂಡರು. 'ದಮನ್ ದುರಂತವು ನನ್ನ ಜೀವನದ ಕರಾಳ ದಿನವಾಗಿ ಉಳಿಯುತ್ತದೆ. ಏಕೆಂದರೆ, ಅದು ನನ್ನ ಪ್ರಪಂಚವನ್ನು ಸೆಕೆಂಡುಗಳಲ್ಲಿ ಎಳೆದಿದೆ. ಮೋರ್ಬಿ ಸೇತುವೆ ಕುಸಿತವು ಅದೇ ಕರಾಳ ನೆನಪುಗಳನ್ನು ಮರಳಿ ತಂದಿತು. ದಮನ್ ದುರಂತದ ದುಃಖದ ಸಂಗತಿಯೆಂದರೆ, ಗುಜರಾತ್ ಸರ್ಕಾರವು ಅದರಿಂದ ಯಾವುದೇ ಪಾಠವನ್ನು ಕಲಿಯಲಿಲ್ಲ. ಒಂದು ಸಣ್ಣ ಪಶ್ಚಾತ್ತಾಪವಿದ್ದರೆ, ಭೂಪೇಂದ್ರ ಪಟೇಲ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಮತ್ತು ಪ್ರತಿ ಸಂತ್ರಸ್ತರ ಮನೆಗೆ ಭೇಟಿ ನೀಡಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ದಮನ್ ಘಟನೆಯ ನಂತರ ಸಂತ್ರಸ್ತರ ಕುಟುಂಬಗಳು ನ್ಯಾಯಕ್ಕಾಗಿ 19 ವರ್ಷಗಳ ಕಾಲ ಕಾಯಬೇಕಾಯಿತು. ಕೊನೆಯಿಲ್ಲದ ಕಾಯುವಿಕೆಯ ಹೊರತಾಗಿಯೂ, ಜಿಲ್ಲಾ ಸೆಷನ್ಸ್ ನ್ಯಾಯಾಲಯದ ತೀರ್ಪು 'ತೃಪ್ತಿಕರ'ವಾಗಿ ಹೊರಬಿದ್ದಿಲ್ಲ. ಇದು,  ದಮನ್ ಸೇತುವೆ ಕುಸಿತ ಸಂತ್ರಸ್ತರ ಸಮಿತಿಯನ್ನು ರಚಿಸುವಂತೆ ಸಂತ್ರಸ್ತ ಕುಟುಂಬಗಳು ಒತ್ತಾಯಿಸುವ ಸುದೀರ್ಘ ಕಾನೂನು ಹೋರಾಟವಾಗಿತ್ತು ಎಂದು ತಿಳಿಸಿದರು.

ತನಿಖೆ ಮತ್ತು ನಂತರ ವಿಚಾರಣೆಯು ಆಮೆಗತಿಯಲ್ಲಿ ಸಾಗಿದಾಗ, ಸಂತ್ರಸ್ತ ಸಮಿತಿಯು ಮುಂಬೈ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಅದರ ಮಧ್ಯಪ್ರವೇಶದ ನಂತರವೇ ವಿಚಾರಣೆ ವೇಗ ಪಡೆದುಕೊಂಡಿತು.

ಈಮಧ್ಯೆ, ದಾದ್ರಾನಗರ ಹವೇಲಿ ಸಂಸದ ದಿವಂಗತ ಮೋಹನ್ ದೇಲ್ಕರ್ ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಕೇಂದ್ರ ಸರ್ಕಾರವು ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಜೆ. ಕೋಚಾರ್ ವಿಚಾರಣಾ ಆಯೋಗವನ್ನು ರಚಿಸಿತು. ಲೋಪಗಳು ಮತ್ತು ನ್ಯೂನತೆಗಳಿಗೆ ಆಯೋಗವು ಕೇಂದ್ರಾಡಳಿತ ಪ್ರದೇಶದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡಿದೆ'

2022ರ ಆಗಸ್ಟ್‌ನಲ್ಲಿ, ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಮೂವರು ಅಧಿಕಾರಿಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಇನ್ನೊಬ್ಬ ಸಂತ್ರಸ್ತೆಯ ತಂದೆ ಧನ್ಸುಖ್ ರಾಥೋಡ್,'ತುಂಬಾ ಕಡಿಮೆ, ತಡವಾಗಿದೆ" ಎಂದು ಹೇಳಿದ್ದಾರೆ.

ಅಪಘಾತ ಸಂಭವಿಸಿದ ಹತ್ತು ವರ್ಷಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ದುರಂತದಲ್ಲಿ ಅವರು ಇಬ್ಬರು ಮಕ್ಕಳಾದ ವಿನಿತ್ (12) ಮತ್ತು ಚಿರಾಗ್ (9) ಅವರನ್ನು ಕಳೆದುಕೊಂಡಿದ್ದರು.

ಆ ಘಟನೆಯ ಸಂತ್ರಸ್ತರ ಸಮಿತಿಯು ಮುಂಬೈ ಹೈಕೋರ್ಟ್‌ನಲ್ಲಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲಿದೆ ಎಂದು ಬಟಕ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com