ಮೋರ್ಬಿ ಸೇತುವೆ ದುರಸ್ತಿ: ಫ್ಲೋರ್ ಮಾತ್ರ ಬದಲಿಸಲಾಗಿತ್ತು, ಅದರ ಕೇಬಲ್‌ ಬದಲಿಸಿರಲಿಲ್ಲ!

ಮೊರ್ಬಿ ಸೇತುವೆ ಕುಸಿತ ದುರಂತದ ಪ್ರಾಥಮಿಕ ಹಂತದ ತನಿಖೆಯಲ್ಲಿ ಸೇತುವೆಯ ವಿನ್ಯಾಸದ ತಪಾಸಣೆ ಕೈಗೊಳ್ಳುವಲ್ಲಿ ವಿಫಲತೆ, ವಸ್ತುಗಳ ಕಳಪೆ ಆಯ್ಕೆ ಮತ್ತು ತುರ್ತು ರಕ್ಷಣೆ ಮತ್ತು ಸ್ಥಳಾಂತರಿಸುವ ಪೂರ್ವಸಿದ್ಧತೆಯ ಅನುಪಸ್ಥಿತಿ ಸೇರಿದಂತೆ ನವೀಕರಣದಲ್ಲಿ ಹಲವಾರು ಲೋಪಗಳು ಕಂಡುಬಂದಿವೆ.
ಮೊರ್ಬಿ ಸೇತುವೆ ಕುಸಿತಗೊಂಡ ಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ
ಮೊರ್ಬಿ ಸೇತುವೆ ಕುಸಿತಗೊಂಡ ಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ
Updated on

ಅಹಮದಾಬಾದ್: ಮೊರ್ಬಿ ಸೇತುವೆ ಕುಸಿತ ದುರಂತದ ಪ್ರಾಥಮಿಕ ಹಂತದ ತನಿಖೆಯಲ್ಲಿ ಸೇತುವೆಯ ವಿನ್ಯಾಸದ ತಪಾಸಣೆ ಕೈಗೊಳ್ಳುವಲ್ಲಿ ವಿಫಲತೆ, ವಸ್ತುಗಳ ಕಳಪೆ ಆಯ್ಕೆ ಮತ್ತು ತುರ್ತು ರಕ್ಷಣೆ ಮತ್ತು ಸ್ಥಳಾಂತರಿಸುವ ಪೂರ್ವಸಿದ್ಧತೆಯ ಅನುಪಸ್ಥಿತಿ ಸೇರಿದಂತೆ ನವೀಕರಣದಲ್ಲಿ ಹಲವಾರು ಲೋಪಗಳು ಕಂಡುಬಂದಿವೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಹರ್ಸೇಂದು ಪಾಂಚಾಲ್ ಅವರು ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಒಂಬತ್ತು ಆರೋಪಿಗಳನ್ನು ರಿಮಾಂಡ್ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಜೆ.ಖಾನ್, ಬಂಧಿತ ಆರೋಪಿಗಳ ಪೈಕಿ ನಾಲ್ವರಾದ OREVA ಗ್ರೂಪ್‌ನ ಇಬ್ಬರು ವ್ಯವಸ್ಥಾಪಕರು ಮತ್ತು ಸೇತುವೆ ದುರಸ್ತಿ ಮಾಡಿದ ಇಬ್ಬರು ಉಪ ಗುತ್ತಿಗೆದಾರರನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

ಪಾಂಚಾಲ್ ಬುಧವಾರ ಟಿಎನ್ಐಇ ಜೊತೆಗೆ ಮಾತನಾಡಿ, 'ಪ್ರಾಥಮಿಕ ತನಿಖೆಯ ಪ್ರಕಾರ, ಸೇತುವೆಯ ಕೇಬಲ್‌ಗಳನ್ನು ಹಾಗೆಯೇ ಬಿಡಲಾಗಿದೆ. ಆದರೆ, ಅದರ ಮರದ ನೆಲಹಾಸಿನ ಬದಲಿಗೆ ಅಲ್ಯುಮಿನಿಯಂ ಹಾಳೆಯ ನೆಲಹಾಸನ್ನು ಹಾಕಲಾಗಿದೆ. 'ಅಲ್ಯುಮಿನಿಯಂನ ಹೆಚ್ಚುವರಿ ತೂಕದ ಕಾರಣ ಕೇಬಲ್‌ಗಳು ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಇದು ತನಿಖೆಯ ವಿಷಯವಾಗಿದೆ ಎಂದು ಅವರು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದರು.

ಸೇತುವೆ ನವೀಕರಣದ ಗುತ್ತಿಗೆಯನ್ನು ಒರೆವಾಗೆ ನೀಡಲಾಯಿತು. ಅದು ಇಬ್ಬರು ಅರ್ಹರಲ್ಲದ ವ್ಯಕ್ತಿಗಳನ್ನು ನಿಯೋಜಿಸಿದೆ. ಒರೆವಾ ತನ್ನ ನವೀಕರಣ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದ್ದು ಇದು ಮೂರನೇ ಬಾರಿ ಎಂದು ತಿಳಿಸಿದರು.

ಸೇತುವೆಯ ನಾಲ್ಕು ಮುಖ್ಯ ಕೇಬಲ್‌ಗಳು ಹಳೆಯದಾಗಿವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ಹೇಳಿದೆ.

ಮುರಿದ ಆಂಕರ್ ಪಿನ್

ಸೇತುವೆ ಮೇಲೆ ತೆರಳಿದ ಜನರ ಹೆಚ್ಚುವರಿ ತೂಕದಿಂದಾಗಿ, ಸೇತುವೆಯ ಕೊನೆಯಲ್ಲಿ ದರ್ಬಾರ್‌ಗಢದಲ್ಲಿ  ಸೇತುವೆಯ ಆಂಕರ್ ಪಿನ್ ಮುರಿದಿದೆ. 'ಆಂಕರ್ ಪಿನ್ ಸಾಮರ್ಥ್ಯವು 125 ಆಗಿತ್ತು. ಆದರೆ, ಸೇತುವೆಯನ್ನು ತೆರೆದಾಗ ಭಾನುವಾರ 350ಕ್ಕೂ ಹೆಚ್ಚು ಜನರು ಅದರ ಮೇಲಿದ್ದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com