ಒಡಿಶಾ: ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗ, ಇಬ್ಬರು ನಕ್ಸಲೀಯರ ಹತ್ಯೆ 

ಒಡಿಶಾದ ಕೊರಾಪುತ್ ಜಿಲ್ಲೆಯಲ್ಲಿ ಶುಕ್ರವಾರ ವಿಶೇಷ  ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಒಡಿಶಾ: ಒಡಿಶಾದ ಕೊರಾಪುತ್ ಜಿಲ್ಲೆಯಲ್ಲಿ ಶುಕ್ರವಾರ ವಿಶೇಷ  ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಮಗಿರಿ ಅರಣ್ಯ ಪ್ರದೇಶದಲ್ಲಿ 20 ನಕ್ಸಲೀಯರು ಇರುವ ಬಗ್ಗೆ ಮಾಹಿತಿ ಗೊತ್ತಾದ ನಂತರ ಬಿಎಸ್ ಎಫ್ ಮತ್ತು ವಿಶೇಷ ಭದ್ರತಾ ಪಡೆಯಿಂದ ಕೋಬಿಂಗ್ ಕಾರ್ಯಾಚರಣೆ ಆರಂಭಿಸಲಾಯಿತು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳನ್ನು ಹತ್ಯೆ ಮಾಡಲಾಯಿತು ಎಂದು ದಕ್ಷಿಣ ವಲಯ ಡಿಐಜಿ ರಾಜೀಶ್ ಪಂಡಿತ್ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಾಚರಣೆ ನಡೆದ ಸ್ಥಳದಿಂದ ಒಂದು ಟಿಪನ್ ಬಾಂಬ್, ಮೂರು ದೇಶಿ ನಿರ್ಮಿತ ಗನ್, ಐದು ಡಿಟೋನೇಟರ್‌ಗಳು, ಮೊಬೈಲ್ ಚಾರ್ಜರ್ ಗಳು, ಮಾವೋವಾದಿಗಳ ಸಮವಸ್ತ್ರಗಳು, 10 ಗಾಂಜಾ ಪಾಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com