ಶತ್ರುಗಳ ರಡಾರ್ ಧ್ವಂಸ ಮಾಡುವ ರುದ್ರಮ್ ಕ್ಷಿಪಣಿ ಖರೀದಿಗೆ ಐಎಎಫ್ ಮುಂದು

ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಐಎಎಫ್ ಮಹತ್ವದ ಹೆಜ್ಜೆ ಇಟ್ಟಿದೆ.
ರುದ್ರಮ್ ಕ್ಷಿಪಣಿಗಳು
ರುದ್ರಮ್ ಕ್ಷಿಪಣಿಗಳು
Updated on: 

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಐಎಎಫ್ ಮಹತ್ವದ ಹೆಜ್ಜೆ ಇಟ್ಟಿದೆ.

ರುದ್ರಮ್ ಮುಂದಿನ ಪೀಳಿಗೆಯ ರೇಡಿಯೇಷನ್ ನಿರೋಧಕ ಕ್ಷಿಪಣಿಗಳನ್ನು (ಎನ್ ಜಿಎಆರ್ ಎಂ) ಖರೀದಿಸುವುದಕ್ಕೆ 1,400 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ. 

ಈ ಕ್ಷಿಪಣಿಗಳಿಂದಾಗಿ ಶತ್ರು ರಾಷ್ಟ್ರಗಳ ಲೊಕೇಷನ್ ನ್ನು ಶೋಧಿಸಿ ನಾಶ ಮಾಡಬಹುದಾಗಿದೆ.ಸುಧಾರಿತ ಕ್ಷಿಪಣಿಗಳನ್ನು ಖರೀದಿಸುವ ಪ್ರಸ್ತಾವನೆ ರಕ್ಷಣಾ ಸಚಿವಾಲಯದ ಬಳಿ ಇದ್ದು, ಈ ಸಂಬಂಧ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಐಎಎಫ್ ಈಗಾಗಲೇ ಈ ಕ್ಷಿಪಣಿಗಳನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಿದ್ದು, ನಿರೀಕ್ಷಿತ ಫಲಿತಾಂಶ ನೀಡಿದೆ. ಎನ್ ಜಿಎಆರ್ ಎಂ ಸುಖೋಯ್-30 ಹಾಗೂ ಮಿರಾಜ್-2000 ಮಾದರಿಯ ಐಎಎಫ್ ಫೈಟರ್ ಗಳಿಂದ ಉಡಾವಣೆ ಮಾಡಬಹುದಾಗಿರುವ ಉಪಕರಣವಾಗಿದೆ. ಕಾರ್ಯಾಚರಣೆಯಲ್ಲಿಲ್ಲದ ರಡಾರ್ ವ್ಯವಸ್ಥೆಯನ್ನೂ ಪತ್ತೆ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com