ದೇಶಿ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್(LCH) ಪ್ರಚಂಡದ ವಿಶೇಷತೆಗಳೇನು? ಅದರ ಸಾಮರ್ಥ್ಯಗಳೇನು?

ಎತ್ತರದ ಪ್ರದೇಶಗಳಲ್ಲಿ ಶತ್ರುಗಳ ಮೇಲೆ ಗುರಿ ಇರಿಸುವುದು, ಟ್ಯಾಂಕ್‌ಗಳು, ಬಂಕರ್‌ಗಳು, ಡ್ರೋನ್‌ಗಳು ಮತ್ತು ಎತ್ತರದ ಪ್ರದೇಶಗಳಲ್ಲಿರುವ ಇತರ ವಸ್ತುಗಳನ್ನು ಹೊಡೆದುರುಳಿಸಲು ಹಗುರ ಯುದ್ಧ ಹೆಲಿಕಾಪ್ಟರ್(LCH) ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಸ್ವದೇಶಿ ನಿರ್ಮಿತ ಹೆಲಿಕಾಪ್ಟರ
ಮೊದಲ ಸ್ವದೇಶಿ ನಿರ್ಮಿತ ಹೆಲಿಕಾಪ್ಟರ

ನವದೆಹಲಿ: ಎತ್ತರದ ಪ್ರದೇಶಗಳಲ್ಲಿ ಶತ್ರುಗಳ ಮೇಲೆ ಗುರಿ ಇರಿಸುವುದು, ಟ್ಯಾಂಕ್‌ಗಳು, ಬಂಕರ್‌ಗಳು, ಡ್ರೋನ್‌ಗಳು ಮತ್ತು ಎತ್ತರದ ಪ್ರದೇಶಗಳಲ್ಲಿರುವ ಇತರ ವಸ್ತುಗಳನ್ನು ಹೊಡೆದುರುಳಿಸಲು ಹಗುರ ಯುದ್ಧ ಹೆಲಿಕಾಪ್ಟರ್(LCH) ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಹೆಲಿಕಾಪ್ಟರ್ ನ್ನು ಭಾರತೀಯ ವಾಯುಪಡೆಗೆ ಸೇರಿಸಿ ಮಾಡಿದ ಭಾಷಣದಲ್ಲಿ, ಸ್ಥಳೀಯವಾಗಿ ನಿರ್ಮಿಸಲಾದ ಎಲ್‌ಸಿಎಚ್ ಅನ್ನು ಐಎಎಫ್‌ಗೆ ಸೇರಿಸಿದ ಕ್ಷಣ ಮಹತ್ವದ ಗಳಿಗೆ ಎಂದು ಬಣ್ಣಿಸಿದರು. 

ಭಾರತದ ಸಾರ್ವಭೌಮತ್ವವನ್ನು ಸಂರಕ್ಷಿಸುವಲ್ಲಿ IAF ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು LCH ನ ಸೇರ್ಪಡೆ ಬಳಿಕ ಅದರ ಒಟ್ಟಾರೆ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗುತ್ತದೆ ಎಂಬ ವಿಶ್ವಾಸವಿದೆ ಎಂದು ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ ಹೇಳಿದರು.

ಕೆಲವು ಬೆಳವಣಿಗೆಗಳ ನಂತರ ನಾವು ದೇಶದ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸುವತ್ತ ಗಮನಹರಿಸಿದ್ದೇವೆ. ದೇಶದ ಭದ್ರತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದರು. ದೇಶೀಯವಾಗಿ ಅಭಿವೃದ್ಧಿಪಡಿಸಿದ ವೇದಿಕೆಗಳಲ್ಲಿ ವಿಶ್ವಾಸ ಮೂಡಿಸಿದ್ದಕ್ಕಾಗಿ ರಕ್ಷಣಾ ಸಚಿವರು ಐಎಎಫ್ ನ್ನು ಶ್ಲಾಘಿಸಿದರು.

ಹೆಲಿಕಾಪ್ಟರ್ ಸಾಮರ್ಥ್ಯವೇನು?: ಎಲ್ ಸಿಎಚ್‌ನ ಸಾಮರ್ಥ್ಯಗಳು ಜಾಗತಿಕವಾಗಿ ಅದರ ವರ್ಗದ ಹೆಲಿಕಾಪ್ಟರ್‌ಗಳಿಗೆ ಸಮನಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಬಹು-ಧರ್ಮೀಯ ಪ್ರಾರ್ಥನಾ ಸಮಾರಂಭದ ನಂತರ ಹೆಲಿಕಾಪ್ಟರ್‌ಗಳಿಗೆ ಸಾಂಪ್ರದಾಯಿಕ ಜಲ-ಕ್ಯಾನನ್ ಸೆಲ್ಯೂಟ್ ನೀಡಲಾಯಿತು. 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪರ್ವತ ಯುದ್ಧಕ್ಕಾಗಿ ಲಘು ಯುದ್ಧ ಹೆಲಿಕಾಪ್ಟರ್ ನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ತಿಳಿಯಲಾಯಿತು.

ನಂತರ IAF ಮತ್ತು HAL ಸಾಕಷ್ಟು ಶಸ್ತ್ರಾಸ್ತ್ರಗಳ ಹೊರೆ, ಸಾಕಷ್ಟು ಇಂಧನವನ್ನು ಸಾಗಿಸುವ ಸಾಮರ್ಥ್ಯದೊಂದಿಗೆ ಹೆಲಿಕಾಪ್ಟರ್ ನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಅನ್ವೇಷಿಸಲು ಪ್ರಾರಂಭಿಸಿದವು. ಹಿಮಾಲಯ ಶ್ರೇಣಿಗಳ ಹೆಚ್ಚಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

2010 ರ ಮಧ್ಯದ ವೇಳೆಗೆ, LCH ನ ಮೂಲಮಾದರಿಯು ಪ್ರಮುಖ ಹಾರಾಟ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿತ್ತು. ಫೆಬ್ರವರಿ 2020ರಲ್ಲಿ, LCH ಉತ್ಪಾದನೆಗೆ ಸಿದ್ಧವಾಗಿದೆ. ಮಾರ್ಚ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಕ್ಯಾಬಿನೆಟ್ ಸಮಿತಿ (CCS) 3,887 ಕೋಟಿ ರೂಪಾಯಿ ವೆಚ್ಚದಲ್ಲಿ 15 ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸೀಮಿತ ಸರಣಿ ಉತ್ಪಾದನೆ (LSP) LCH ಖರೀದಿಗೆ ಅನುಮೋದನೆ ನೀಡಿತು. 

ಇದು ಹಲವಾರು ಸ್ಟೆಲ್ತ್ ವೈಶಿಷ್ಟ್ಯಗಳು, ಶಸ್ತ್ರಸಜ್ಜಿತ-ರಕ್ಷಣಾ ವ್ಯವಸ್ಥೆಗಳು, ರಾತ್ರಿ ದಾಳಿ ಸಾಮರ್ಥ್ಯ ಮತ್ತು ದೀರ್ಘಕಾಲ ಬಾಳ್ವಿಕೆಗಾಗಿ ಲ್ಯಾಂಡಿಂಗ್ ಗೇರ್ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LCH ಅಗತ್ಯವಿರುವ ಚುರುಕುತನ, ಕುಶಲತೆ, ವಿಸ್ತೃತ ಶ್ರೇಣಿ, ಎತ್ತರದ ಕಾರ್ಯಕ್ಷಮತೆ ಮತ್ತು ಯುದ್ಧ ಹುಡುಕಾಟ ಮತ್ತು ಪಾರುಗಾಣಿಕಾ (CSAR), ಶತ್ರುಗಳ ವಾಯು ರಕ್ಷಣಾ ನಾಶ (DEAD) ಮತ್ತು ಪ್ರತಿ-ಬಂಡಾಯ ಸೇರಿದಂತೆ ಹಲವಾರು ಪಾತ್ರಗಳನ್ನು ನಿರ್ವಹಿಸಲು ಎಲ್ಲಾ ಹವಾಮಾನದ ಯುದ್ಧ ಸಾಮರ್ಥ್ಯವನ್ನು ಹೊಂದಿದೆ.

ಗಾಜಿನ ಕಾಕ್‌ಪಿಟ್ ಮತ್ತು ಸಂಯೋಜಿತ ಏರ್‌ಫ್ರೇಮ್ ರಚನೆಯಂತಹ ಹಲವಾರು ಪ್ರಮುಖ ವಾಯುಯಾನ ತಂತ್ರಜ್ಞಾನಗಳನ್ನು ಸ್ವದೇಶಿಗೊಳಿಸಲಾಗಿದೆ. ಭವಿಷ್ಯದ ಸರಣಿ-ಉತ್ಪಾದನೆಯ ಆವೃತ್ತಿಯು ಮತ್ತಷ್ಟು ಆಧುನಿಕ ಮತ್ತು ಸ್ಥಳೀಯ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ನಾಲ್ಕು LCH ಹೆಲಿಕಾಪ್ಟರ್‌ಗಳನ್ನು ಈಗಾಗಲೇ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ LCH ಗಳನ್ನು ಸಂಗ್ರಹಿಸಲು IAF ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮುದ್ರ ಮಟ್ಟದಲ್ಲಿ, ಮರುಭೂಮಿ ಪ್ರದೇಶಗಳಲ್ಲಿ ಮತ್ತು ಸಿಯಾಚಿನ್ ಸೇರಿದಂತೆ ಕಠಿಣ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಣೆ ಬಗ್ಗೆ ಹೆಲಿಕಾಪ್ಟರ್ ನ್ನು ಪರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com