ಸರ್ಕಾರಕ್ಕೆ ಮುಜುಗರ: ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ನಡವ್ ಲ್ಯಾಪಿಡ್ ಟೀಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ

ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಿ ಕಾಶ್ಮೀರಿ ಫೈಲ್ಸ್ ಕುರಿತು ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಮುಜುಗರ ಉಂಟುಮಾಡುತ್ತದೆ ಮತ್ತು ಅಂತಿಮವಾಗಿ ದ್ವೇಷವನ್ನು ಹೊರಹಾಕುತ್ತದೆ ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಿ ಕಾಶ್ಮೀರಿ ಫೈಲ್ಸ್ ಕುರಿತು ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಮುಜುಗರ ಉಂಟುಮಾಡುತ್ತದೆ ಮತ್ತು ಅಂತಿಮವಾಗಿ ದ್ವೇಷವನ್ನು ಹೊರಹಾಕುತ್ತದೆ ಎಂದು ಹೇಳಿದೆ.

53ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಜ್ಯೂರಿ ಮುಖ್ಯಸ್ಥ ಲ್ಯಾಪಿಡ್ ಅವರು ಸೋಮವಾರ ಹಿಂದಿ ಚಲನಚಿತ್ರ ದಿ ಕಾಶ್ಮೀರ್ ಫೈಲ್ ಅನ್ನು 'ಪ್ರಚಾರ' ಮತ್ತು 'ಅಶ್ಲೀಲ' ಎಂದು ಬಣ್ಣಿಸಿದ ನಂತರ ವಿರೋಧ ಪಕ್ಷ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ, ಅವರ ಸರ್ಕಾರ, ಬಿಜೆಪಿಯು ಮುತುವರ್ಜಿಯಿಂದ ಹೆಚ್ಚಿನ ಪ್ರಚಾರ ನೀಡಿದ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ತಿರಸ್ಕರಿಸಲಾಗಿದೆ. ಜ್ಯೂರಿ ಮುಖ್ಯಸ್ಥ ನಡಾವ್ ಲ್ಯಾಪಿಡ್ ಇದನ್ನು 'ಅಪ್ರಚಾರ, ಅಸಭ್ಯ ಚಿತ್ರ - ಚಲನಚಿತ್ರೋತ್ಸವಕ್ಕೆ ಸೂಕ್ತವಲ್ಲ' ಎಂದು ಕರೆದಿದ್ದಾರೆ' ಎಂದು ಕಾಂಗ್ರೆಸ್ ವಕ್ತಾರರಾದ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.

ದ್ವೇಷವು ಅಂತಿಮವಾಗಿ ಹೊರನಡೆಯುತ್ತದೆ' ಎಂದು ಸುಪ್ರಿಯಾ ಸೋಮವಾರ ತಡರಾತ್ರಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರೆ ಶಾಮ ಮೊಹಮ್ಮದ್ ಮಂಗಳವಾರ ಟ್ವೀಟ್ ಮಾಡಿ, 'ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ ಜ್ಯೂರಿ ಅಧ್ಯಕ್ಷ ನಡಾವ್ ಲ್ಯಾಪಿಡ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಅಸಭ್ಯ, ಕೀಳು ಸದಭಿರುಚಿತ ಚಿತ್ರ ಎಂದು ಕರೆದಿದ್ದಾರೆ. ದೇಶದ ಜನರನ್ನು ಧ್ರುವೀಕರಿಸುವ ಪ್ರಯತ್ನದಲ್ಲಿ, ಬಿಜೆಪಿ ಸರ್ಕಾರವು ಈ ಸಿನಿಮಾವನ್ನು ಪ್ರಚಾರ ಮಾಡಲು ಹೊರಟಿತು. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಭಾರಿ ಮುಖಭಂಗವಾಯಿತು! ಎಂದಿದ್ದಾರೆ.

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022ರ ಸಮಾರೋಪ ಸಮಾರಂಭದಲ್ಲಿನ ತಮ್ಮ ಭಾಷಣದಲ್ಲಿ ಲ್ಯಾಪಿಡ್ ಅವರು, 'ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದನ್ನು ನೋಡಿ ವಿಚಲಿತರಾದೆವು ಮತ್ತು ಆಘಾತಗೊಂಡೆವು. ಈ ಸಿನಿಮಾ ನೋಡಿ ನಮ್ಮೆಲ್ಲರ ಮನ ಕಲಕಿತು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಮತ್ತು ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಪ್ರಚಾರ ಮತ್ತು ಅಸಭ್ಯ ಚಲನಚಿತ್ರದಂತೆ ನಮಗೆ ಭಾಸವಾಯಿತು. ಈ ವಿಚಾರವನ್ನು ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಏಕೆಂದರೆ, ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಈ ವೇದಿಕೆ ನಿಜವಾಗಿಯೂ ಸ್ವೀಕರಿಸುತ್ತದೆ' ಎಂದು ಹೇಳಿದರು.

ಲ್ಯಾಪಿಡ್ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಟೀಕಿಸಿದ ನಂತರ, ಇಸ್ರೇಲ್‌ನ ಭಾರತದ ರಾಯಭಾರಿ ನೌರ್ ಗಿಲೋನ್, ಲ್ಯಾಪಿಡ್ ಅವರನ್ನು ಟೀಕಿಸಿದರು. 'ಅವರು ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಲು ಭಾರತದ ಆಹ್ವಾನವನ್ನು 'ಕೆಟ್ಟ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿರುವುದರಿಂದ' ಅವರಿಗೆ ನಾಚಿಕೆಯಾಗಬೇಕು' ಎಂದು ಹೇಳಿದರು.

ಮಾರ್ಚ್ 11 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದ ಭಾಗವಾಗಿತ್ತು ಮತ್ತು ನವೆಂಬರ್ 22 ರಂದು ಪ್ರದರ್ಶಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com