ಸಿವಿಕ್ ಚಂದ್ರನ್
ಸಿವಿಕ್ ಚಂದ್ರನ್

ಲೈಂಗಿಕ ಕಿರುಕುಳ ಪ್ರಕರಣ: ತನಿಖಾಧಿಕಾರಿ ಮುಂದೆ ಲೇಖಕ ಸಿವಿಕ್ ಚಂದ್ರನ್ ಹಾಜರು

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ  ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಸಿವಿಕ್ ಚಂದ್ರನ್ ಮಂಗಳವಾರ ಬೆಳಗ್ಗೆ ವಡಗರ ಡಿವೈಎಸ್ ಎದುರು ಶರಣಾಗಿದ್ದಾರೆ.

ಕೋಝಿಕೊಡ್: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ  ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಸಿವಿಕ್ ಚಂದ್ರನ್ ಮಂಗಳವಾರ ಬೆಳಗ್ಗೆ ವಡಗರ ಡಿವೈಎಸ್ ಎದುರು ಶರಣಾಗಿದ್ದಾರೆ. ಈ ಹಿಂದೆ ಜಿಲ್ಲಾ ನ್ಯಾಯಾಲಯ ನೀಡಿದ ನಿರೀಕ್ಷಿತ ಜಾಮೀನನ್ನು ಕೇರಳ ಹೈಕೋರ್ಟ್ ರದ್ದುಪಡಿಸಿತು. ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಚಂದ್ರನ್ ಗೆ ಹೈಕೋರ್ಟ್ ನಿರ್ದೇಶಿಸಿತ್ತು.

ವಕೀಲರೊಂದಿಗೆ ಚಂದ್ರನ್ ಡಿವೈಎಸ್ಪಿ ಮುಂದೆ ತನಿಖೆಗೆ ಹಾಜರಾದರು. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಅವರನ್ನು ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.  ಏಪ್ರಿಲ್ ನಲ್ಲಿ ಸಿವಿಕ್ ಚಂದ್ರನ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ದಲಿತ ಮಹಿಳೆ ದೂರು ದಾಖಲಿಸಿದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಎರಡು ತಿಂಗಳ ಹಿಂದೆ ಬೇರೆ ಬೇರೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಚಂದ್ರನ್ ಗೆ ಜಾಮೀನು ನೀಡಿತ್ತು. ಜಾಮೀನು ಆದೇಶದಲ್ಲಿ ಸಂತ್ರಸ್ತೆಯ ಉಡುಪಿನ ಬಗ್ಗೆ ಉಲ್ಲೇಖಿಸಲಾಗಿತ್ತು. ತದನಂತರ ಹೈಕೋರ್ಟ್ ಜಾಮೀನನ್ನು ರದ್ದುಪಡಿಸಿತ್ತು, 

Related Stories

No stories found.

Advertisement

X
Kannada Prabha
www.kannadaprabha.com