ಕತ್ತು ಹಿಸುಕಿ, ಗಂಟಲು ಸೀಳಿ ತಾಯಿಯ ಕೊಲೆ; 3 ದಿನಗಳ ಬಳಿಕ 77 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

ಕ್ಷಿತಿಜ್ ಎಂಬ ವ್ಯಕ್ತಿ 77 ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಆತ ತನ್ನ ತಾಯಿಯನ್ನು ಹೇಗೆ ಮತ್ತು ಏಕೆ ಕೊಂದನು ಮತ್ತು ಖಿನ್ನತೆಯೊಂದಿಗಿನ ಯುದ್ಧವನ್ನು ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: 25 ವರ್ಷದ ಯುವಕನೊಬ್ಬ ತನ್ನ ತಾಯಿಯನ್ನು ಕೊಂದು ಮೂರು ದಿನಗಳ ಕಾಲ ಶವದೊಂದಿಗೆ ಕುಳಿತು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಿಲ್ಲಿಯ ಬುದ್ದ ವಿಹಾರದಲ್ಲಿ ಭಾನುವಾರ ನಡೆದಿದೆ.

ಕ್ಷಿತಿಜ್ ಎಂಬ ವ್ಯಕ್ತಿ 77 ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಆತ ತನ್ನ ತಾಯಿಯನ್ನು ಹೇಗೆ ಮತ್ತು ಏಕೆ ಕೊಂದನು ಮತ್ತು ಖಿನ್ನತೆಯೊಂದಿಗಿನ ಯುದ್ಧವನ್ನು ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಿತಿಜ್ ಗುರುವಾರ ತನ್ನ ತಾಯಿ ಮಿಥಿಲೇಶ್ ಅವರ ಕತ್ತು ಹಿಸುಕಿದ್ದಾನೆ. ಬಳಿಕ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಈತನ ತಂದೆ 10 ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಮೂರು ದಿನಗಳ ಕಾಲ ತನ್ನ ತಾಯಿಯ ಮೃತದೇಹದ ಬಳಿಯೇ ಇದ್ದನು ಮತ್ತು ಮೃತ ದೇಹದ ದುರ್ವಾಸನೆಯನ್ನು ತಡೆಯಲು ಸುಗಂಧ ದ್ರವ್ಯಗಳನ್ನು ಬಳಸಿದ್ದನು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

'ತಾನು ಬಾಲ್ಯದಿಂದಲೂ ಒಂಟಿಯಾಗಿದ್ದೇನೆ ಮತ್ತು ನನಗೆ ಸ್ನೇಹಿತರಿಲ್ಲ ಎಂದಿರುವ ಆತ, ತಮ್ಮ ತಂದೆ ಮತ್ತು ಅವರೊಂದಿಗಿನ ಸಮಸ್ಯೆಗಳ ಬಗ್ಗೆಯೂ ಬರೆದಿದ್ದಾರೆ. ಅವರ ತಂದೆ ನಿಧನರಾದ ಬಳಿಕ, ತಾಯಿ ಆತನಿಗೆ ಹಣ ನೀಡಲಿಲ್ಲ. ನಾನು ಮತ್ತು ತನ್ನ ತಾಯಿ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದೆವು ಎಂದು ಬರೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ತಾಯಿ 'ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಹೀಗಾಗಿ ಇವುಗಳಿಂದ ಅವರಿಗೆ ಮುಕ್ತಿ ಕೊಡಿಸಲು ಬಯಸಿದ್ದೆ. ಕ್ಷಿತಿಜ್ ಮೊದಲು ಸರಪಳಿಯಿಂದ ತನ್ನ ತಾಯಿಯ ಕತ್ತು ಹಿಸುಕಿದ್ದಾನೆ. ಅದಾದ 10 ನಿಮಿಷಗಳ ನಂತರ, 'ಒಬ್ಬ ವ್ಯಕ್ತಿಯ ಕತ್ತು ಹಿಸುಕಿದರೆ ಆತ್ಮವು ಮೋಕ್ಷ ಪಡೆಯುವುದಿಲ್ಲ' ಎಂದು ಎಲ್ಲೋ ಓದಿದ್ದಕ್ಕಾಗಿ ನಂತರ ಆಕೆಯ ಕತ್ತು ಸೀಳಿದ್ದಾನೆ. ಇದಾದ ಬಳಿಕ ಆತ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದಿ ತನ್ನ ತಾಯಿಯ ದೇಹಕ್ಕೆ 'ಗಂಗಾಜಲ' ಅಥವಾ ಪವಿತ್ರ ಜಲವನ್ನು ಚಿಮುಕಿಸಿದ್ದಾನೆ. ಇದರಿಂದ ಅವಳು ಮೋಕ್ಷವನ್ನು ಪಡೆದಳು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಭಾನುವಾರ, ನೆರೆಹೊರೆಯಲ್ಲಿದ್ದ ತನ್ನ ತಾಯಿಯ ಸ್ನೇಹಿತೆಯೊಬ್ಬರು ಸಂಜೆ 7 ಗಂಟೆಯ ಸುಮಾರಿಗೆ ಕರೆ ಮಾಡಿದಾಗ ಕ್ಷಿತಿಜ್, ಮೂರು ದಿನಗಳ ಹಿಂದೆ ತನ್ನ ತಾಯಿ ಮೃತಪಟ್ಟಿದ್ದು, ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ತಾಯಿಯ ಮೃತ ದೇಹವು ಮನೆಯಲ್ಲಿದೆ ಎಂದು ಆಕೆಗೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಬರಿಗೊಂಡ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಸ್ನಾನಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿ ತಾಯಿಯ ಮೃತದೇಹ ಲಭ್ಯವಾಗಿದ್ದು, ಕ್ಷಿತಿಜ್ ಅವರ ದೇಹವು ಕೋಣೆಯಲ್ಲಿ ಪತ್ತೆಯಾಗಿದೆ.

ಕ್ಷಿತಿಜ್ ಅವರು ಕೆಲವು ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರು ನಿರುದ್ಯೋಗಿಯಾಗಿದ್ದರಿಂದ ಅವರ ತಾಯಿ ಮತ್ತು ತನಗೆ ವೈದ್ಯಕೀಯ ವೆಚ್ಚವನ್ನು ಭರಿಸಲಾಗಲಿಲ್ಲ ಎಂದು ಡೆತ್‌ನೋಟ್‌‌ನಲ್ಲಿ ತಿಳಿಸಿದ್ದಾರೆ.

ಕ್ಷಿತಿಜ್ ಅವರ ತಂದೆ ಶ್ರೀನಿವಾಸ್ ಅವರು ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದರು. ಅವರ ಮರಣದ ನಂತರ, ತಾಯಿ ಮತ್ತು ಮಗ ಅವರ ಮಾಸಿಕ ಪಿಂಚಣಿಯಿಂದ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com