ಭಾರತೀಯರ ಆತಿಥ್ಯ, ಸಂಸ್ಕೃತಿಗೆ ಮನಸೋತಿದ್ದ ಬ್ರಿಟನ್ ರಾಣಿ ಎಲಿಜಬೆತ್-II, ಕ್ವೀನ್ ಜೊತೆ ಉಪಾಹಾರ ನೆನಪು ಮಾಡಿಕೊಂಡ ಮುಂಬೈ ಡಬ್ಬಾವಾಲಾಗಳು

96 ನೇ ವಯಸ್ಸಿನಲ್ಲಿ ನಿಧನರಾದ ಬ್ರಿಟನ್ ರಾಣಿ ಎಲಿಜಬೆತ್ II, 1952 ರಲ್ಲಿ ವಸಾಹತುಶಾಹಿ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ ನಂತರ ಸಿಂಹಾಸನಕ್ಕೆ ಏರಿದ ಮೊದಲ ಬ್ರಿಟಿಷ್ ದೊರೆ ಮತ್ತು ಭಾರತದ ಸಂಸ್ಕೃತಿ, ಶ್ರೀಮಂತರ ಪರಂಪರೆ, ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಮೆಚ್ಚಿದ ರಾಣಿಯಾಗಿದ್ದರು. ಅವರು ರಾಣಿ ಪಟ್ಟಕ್ಕೆ ಏರಿದ ನಂತರ ಮೂರು ಬಾರಿ 1961, 1983 ಮತ್ತು 1997ರಲ್ಲ
ಇಂದಿರಾ ಗಾಂಧಿ ಜೊತೆ ಕ್ವೀನ್ ಎಲಿಜಬೆತ್
ಇಂದಿರಾ ಗಾಂಧಿ ಜೊತೆ ಕ್ವೀನ್ ಎಲಿಜಬೆತ್
Updated on

ಲಂಡನ್: 96 ನೇ ವಯಸ್ಸಿನಲ್ಲಿ ನಿಧನರಾದ ಬ್ರಿಟನ್ ರಾಣಿ ಎಲಿಜಬೆತ್ II, 1952 ರಲ್ಲಿ ವಸಾಹತುಶಾಹಿ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ ನಂತರ ಸಿಂಹಾಸನಕ್ಕೆ ಏರಿದ ಮೊದಲ ಬ್ರಿಟಿಷ್ ದೊರೆ ಮತ್ತು ಭಾರತದ ಸಂಸ್ಕೃತಿ, ಶ್ರೀಮಂತರ ಪರಂಪರೆ, ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಮೆಚ್ಚಿದ ರಾಣಿಯಾಗಿದ್ದರು. ಅವರು ರಾಣಿ ಪಟ್ಟಕ್ಕೆ ಏರಿದ ನಂತರ ಮೂರು ಬಾರಿ 1961, 1983 ಮತ್ತು 1997ರಲ್ಲಿ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. 

ಭಾರತೀಯ ಜನರ ಆತ್ಮೀಯತೆ ಮತ್ತು ಆತಿಥ್ಯ, ಭಾರತದ ಶ್ರೀಮಂತಿಕೆ ಮತ್ತು ವೈವಿಧ್ಯತೆಯು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಅವರು ತಮ್ಮ ಭಾಷಣವೊಂದರಲ್ಲಿ ಹೇಳಿದ್ದರು. 1961ರಲ್ಲಿ, ರಾಣಿ ಮತ್ತು ಅವರ ಪತಿ, ದಿವಂಗತ ಪ್ರಿನ್ಸ್ ಫಿಲಿಪ್, ಎಡಿನ್ಬರ್ಗ್ ಡ್ಯೂಕ್, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ, ನಂತರ ಬಾಂಬೆ, ಮದ್ರಾಸ್ ಮತ್ತು ಕೋಲ್ಕತ್ತಾಗಳಲ್ಲಿ ಪ್ರವಾಸ ಮಾಡಿದ್ದರು. ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ದೆಹಲಿಯಲ್ಲಿ ಮಹಾತ್ಮಾ ಗಾಂದಿ ಸಮಾಧಿ ರಾಜ್ ಘಾಟ್ ಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. 

ಅಂದಿನ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. 1983 ಭೇಟಿ ನೀಡಿದ್ದ ವೇಳೆ ಮದರ್ ತೆರೇಸಾ ಅವರಿಗೆ ಗೌರವಾನ್ವಿತ ಆರ್ಡರ್ ಆಫ್ ದಿ ಮೆರಿಟ್ ನ್ನು ನೀಡಿ ಗೌರವಿಸಿದ್ದರು. ಭಾರತದ ಸ್ವಾತಂತ್ರ್ಯದ 50 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿನ ಅವರ ಭೇಟಿ ಕೊನೆಯದಾಗಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮ, ವಸಾಹತುಶಾಹಿ ಆಡಳಿತ, ಜಲಿಯನ್ ವಾಲಾಬಾಗ್ ಹತ್ಯಾಕಾಂಡಗಳ ಬಗ್ಗೆ ಕೂಡ ಮಾತನಾಡಿದ್ದರು. ಅವರು ಮತ್ತು ಅವರ ಪತಿ ಅಮೃತಸರದ 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ್ದರು. 

ತಮ್ಮ ದೇಶದಲ್ಲಿ  ಭಾರತದ ಮೂವರು ರಾಷ್ಟ್ರಪತಿಗಳಾದ 1963 ರಲ್ಲಿ ಡಾ ರಾಧಾಕೃಷ್ಣನ್, 1990 ರಲ್ಲಿ ಆರ್. ವೆಂಕಟರಾಮನ್ ಮತ್ತು 2009 ರಲ್ಲಿ ಪ್ರತಿಭಾ ಪಾಟೀಲ್ ಅವರಿಗೆ ರಾಣಿ ಆತಿಥ್ಯ ನೀಡಿದ್ದರು. ಬ್ರಿಟನ್ ಮತ್ತು ಭಾರತವು ಸುದೀರ್ಘ-ಹಂಚಿಕೆಯ ಇತಿಹಾಸವನ್ನು ಹೊಂದಿದೆ, ಇದು ಈ ಹೊಸ ಶತಮಾನಕ್ಕೆ ಸೂಕ್ತವಾದ ಹೊಸ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಇಂದು ಉತ್ತಮ ಶಕ್ತಿಯ ಮೂಲವಾಗಿದೆ ಎಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಆತಿಥ್ಯದ ವೇಳೆ ಹೇಳಿದ್ದರು. 

ಬ್ರಿಟನ್ ರಾಣಿ ಎಲಿಜಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್ 99ನೇ ವಯಸ್ಸಿನಲ್ಲಿ ಕಳೆದ ಏಪ್ರಿಲ್ ನಲ್ಲಿ ನಿಧನ ಹೊಂದಿದ್ದರು. 
ಬ್ರಿಟನ್ ರಾಣಿಯ ಭೇಟಿಯನ್ನು ನೆನಪು ಮಾಡಿಕೊಂಡ ಡಬ್ಬಾವಾಲಗಳು: ಇಬ್ಬರು ಮರಾಠಿ ಮಾತನಾಡುವ ಡಬ್ಬಾವಾಲಾಗಳು ಮುಂಬೈಗೆ ರಾಣಿ ಎಲಿಜಬೆತ್ ಬಂದಾಗಿದ್ದಾಗ ನಡೆದ ಸಂಭಾಷಣೆ, ಮಾತುಕತೆಯನ್ನು ನೆನಪಿಸಿಕೊಳ್ಳುತ್ತಾರೆ. 

ನೂತನ್ ಮುಂಬೈ ಟಿಫಿನ್ ಬಾಕ್ಸ್ ಸಪ್ಲೈಯರ್ಸ್ ಅಸೋಸಿಯೇಷನ್‌ನ ಪದಾಧಿಕಾರಿ ರಘುನಾಥ್ ಮೆಡ್ಗೆ ಅವರು ಪ್ರಿನ್ಸ್ ಚಾರ್ಲ್ಸ್ ಅವರ ರಾಜಮನೆತನದ ವಿವಾಹದಲ್ಲಿ ವಿಶೇಷ ಅತಿಥಿಗಳಾಗಿ ಮುಂಬೈನ ಇನ್ನೊಬ್ಬ ಡಬ್ಬಾವಾಲಾ ಸೋಪಾನ್ ಮಾರೆ ಅವರೊಂದಿಗೆ ಎರಡು ಬಾರಿ ಉಪಹಾರ ಸೇವಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ. ಅದು ಪ್ರಿನ್ಸ್ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಪಾರ್ಕರ್-ಬೌಲ್ಸ್ ಅವರ 2005ರಲ್ಲಿನ ವಿವಾಹ ಸಂದರ್ಭ. 

ರಾಯಲ್ ವೆಡ್ಡಿಂಗ್‌ ನಲ್ಲಿ ಭಾಗವಹಿಸಲು ಲಂಡನ್ ಗೆ ಎಂಟು ದಿನಗಳ ಪ್ರವಾಸ ಕೈಗೊಂಡಿದ್ದೆವು. ರಾಣಿ ಎಲಿಜಬೆತ್ ಮತ್ತು ರಾಜಮನೆತನದ ಇತರ ಸದಸ್ಯರೊಂದಿಗೆ ನಾವು ಎರಡು ಬಾರಿ ಉಪಹಾರ ಸೇವಿಸಿದ್ದೇವೆ. ಅವರು ತುಂಬಾ ವಿನಮ್ರವಾಗಿ ನಡೆದುಕೊಂಡರುಯ ಭಾಷೆಯ ತಡೆಗೋಡೆ ಇದ್ದರೂ, ರಾಜಸ್ಥಾನದ ರಾಜಮನೆತನದಿಂದ ಬಂದವರು ಮತ್ತು ಮದುವೆಗೆ ಆಹ್ವಾನಿತರಾಗಿದ್ದ ಪದ್ಮಿನಿ ದೇವಿ ಅವರು ರಾಣಿಯೊಂದಿಗಿನ ನಮ್ಮ ಸಂಭಾಷಣೆಯ ಸಮಯದಲ್ಲಿ ಅನುವಾದ ಮಾಡಿ ಸಹಾಯ ಮಾಡಿದರು ಎಂದರು. 

ರಾಣಿಯೊಂದಿಗಿನ ಮೊದಲ ಬಾರಿಗೆ ಬರ್ಮಿಂಗ್ಹ್ಯಾಮ್ ಅರಮನೆಯಲ್ಲಿ ಉಪಾಹಾರ ಸೇವಿಸಿದೆವು. ಎರಡನೇ ಬಾರಿ ಉಪಾಹಾರವು ವಿಂಡ್ಸರ್ ಕ್ಯಾಸಲ್‌ನಲ್ಲಿ ಆಗಿತ್ತು. ಅದು ರಾಜಮನೆತನದ ವಿವಾಹದ ಸ್ಥಳವಾಗಿತ್ತು. ಬಸ್ ನಲ್ಲಿ ಅಲ್ಲಿಗೆ ಹೋಗಿದ್ದೆವು ಎಂದು ಮೆಡ್ಗೆ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com